ಮಂಗಳೂರು:  ಪ್ರವೀಣ್  ನೆಟ್ಟಾರ್‌ ಪತ್ನಿಗೆ ನಾವು ಎನ್‌ಎಂಪಿಟಿಯಲ್ಲಿ ಉದ್ಯೋಗ ನೀಡುತ್ತೇವೆ : ನಳಿನ್‌ ಭರವಸೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು:  ಪ್ರವೀಣ್  ನೆಟ್ಟಾರ್‌ ಪತ್ನಿಗೆ ನಾವು ಎನ್‌ಎಂಪಿಟಿಯಲ್ಲಿ ಉದ್ಯೋಗ ನೀಡುತ್ತೇವೆ : ನಳಿನ್‌ ಭರವಸೆ

ಮಂಗಳೂರು: ಜಿಲ್ಲೆಯ ಆರು ಬಿಜೆಪಿ ಶಾಸಕರೊಂದಿಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್‌ ಕಟೀಲ್‌ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಪೂರ್ಣ ಬಹುಮತ ಪಡೆದಿರುವ ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ಮಾಡುವ ಬದಲು ಅಧಿಕಾರ ಹಂಚಿಕೆಯ ಚರ್ಚೆಯಲ್ಲಿದೆ. ಐದು ಉಚಿತ ಯೋಜನೆಗಳನ್ನು 20 ದಿನಗಳಾದರೂ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.

ಇದರಿಂದಾಗಿ ಸರ್ಕಾರಿ ನೌಕರರು ಏಟು ತಿನ್ನುವ ಪರಿಸ್ಥಿತಿ ಬಂದಿದೆ. ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ. ಕಾಂಗ್ರೆಸ್ ವಿಜಯೋತ್ಸವದಲ್ಲೇ ಗಲಭೆ ಮಾಡಿದ್ದು, ದ್ವೇಷದ ರಾಜಕಾರಣ ಮಾಡುತ್ತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ಹಾಕಲಾಗಿದೆ.

ಮಂಗಳೂರು : ಒಂದು ತಿಂಗಳ‌ ಒಳಗಾಗಿ ಉಚಿತ ಘೋಷಣೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ : ನಳಿನ್ – Vishwanews24

ಕಾಂಗ್ರೆಸ್ ದ್ವೇಷ ಸಾಧನೆ ಮೂಲಕ ಬಿಜೆಪಿ ಯನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನಲ್ಲಿ ತಾಕತ್ ಇದ್ರೆ ಪಾಕ್ ಪರ ಜೈಕಾರ ಕೂಗಿದವರನ್ನು ಬಂಧಿಸಿ ಎಂದು ನಳಿನ್‌ ಸವಾಲಯ ಹಾಕಿದರು. ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗ ವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಆದರೆ ನೀವು ಉದ್ಯೋಗ ನೀಡದಿದ್ದರೂ ಎನ್ಎಂಪಿಟಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ದ್ವೇಷದ ರಾಜಕಾರಣವನ್ನು ವಿರೋಧಿಸಿ ಪ್ರತಿಭಟಿಸುತ್ತೇವೆ. ತಿಂಗಳ ಒಳಗೆ ಎಲ್ಲವೂ ಸರಿಯಾಗದಿದ್ದರೆ ಹೋರಾಟ ಎಂದು ಹೇಳಿದರು. ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಗಳ ಪೂರ್ಣ ತನಿಖೆ ನಡೆಯಲಿ. ಸಿದ್ಧರಾಮಯ್ಯ ಮೇಲಿರುವ ಲೋಕಾಯುಕ್ತ ಕೇಸ್ ಅನ್ನೂ ತನಿಖೆ ಮಾಡಲಿ. ಕರಾವಳಿ ಜಿಲ್ಲೆಗೆ ಒಂದೂ ಮಂತ್ರಿ ಪಟ್ಟ ಇಲ್ಲದಿರುವ ಬಗ್ಗೆ ದುಃಖವಿದೆ ಎಂದು ನಳಿನ್‌ ಹೇಳಿದರು.

ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ದೌಡು : ಶಾಶ್ವತ ಕಾಮಗಾರಿ ಬಗ್ಗೆ ಸಮಾಲೋಚನೆ – Vishwanews24

Leave a Reply