Featured

ಮಂಗಳೂರು : ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ : ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ : ತಂದೆ ಚಿತ್ತರಂಜನ್ -Vishwanews24

ಮಂಗಳೂರು : ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ : ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ : ತಂದೆ ಚಿತ್ತರಂಜನ್ -Vishwanews24

ಮಂಗಳೂರು: ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್‌ ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮದಲ್ಲೂ ತನಿಖೆ ಪ್ರಗತಿಯಲ್ಲಿದೆ. ತಂದೆ ಚಿತ್ತರಂಜನ್‌ ಅವರು, ”ನನ್ನ ಮಗಳು ಪ್ರೇಕ್ಷಾಳ ಅಂತಿಮ ಸಂಸ್ಕಾರದ ವೇಳೆಯೂ ಗಾಂಜಾ ಗ್ಯಾಂಗ್‌ ಬೆದರಿಕೆಯೊಡ್ಡಿದೆ” ಎಂದು ತಿಳಿಸಿದ್ದಾರೆ.

”ಗಾಂಜಾ ಗ್ಯಾಂಗ್ ಬಗ್ಗೆ ಮಾತನಾಡದಂತೆ ಈ ತಂಡವು ನಮಗೆ ಎಚ್ಚರಿಕೆ ನೀಡಿದೆ. ನಮಗೆ ಮಾತ್ರವಲ್ಲದೆ ಸಮೀಪದ ಅಂಗಡಿ, ನೆರೆಹೊರೆಯ ಮನೆಯವರಿಗೆಲ್ಲಾ ಈ ತಂಡವು ಬೆದರಿಸಿದೆ. ನಮಗೆಲ್ಲರಿಗೂ ಇಷ್ಟೆಲ್ಲಾ ಕಿರುಕುಳ ನೀಡಿದವರು ಇನ್ನು ನನ್ನ ಮಗಳಿಗೆಷ್ಟು ಕಿರುಕುಳ ನೀಡಿರಬಹುದು” ಎಂದು ಪ್ರಶ್ನಿಸಿರುವ ಅವರು, ”ಇದು ಗಾಂಜಾ ತಂಡ ನನ್ನ ಮಗಳು ಆತ್ಮಹತ್ಯೆ ಮಾಡುವಂತೆ ಕಿರುಕುಳ ನೀಡಿದೆ” ಎಂದು ದೂರಿದ್ದಾರೆ.

ಮಂಗಳೂರು : ವಿಶೇಷವಾಗಿ ತಯಾರಿಸಿದ ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ : ಏರ್‌‌ಪೋರ್ಟ್‌ನಲ್ಲಿ ವ್ಯಕ್ತಿಯ ಬಂಧನ -Vishwanews24

”ನನ್ನ ಭವಿಷ್ಯವೇ ಬೆಂಗಳೂರಿನಲ್ಲಿ ನಡೆಯುವ ಫೋಟೋ ಶೂಟ್‌ನಲ್ಲಿದೆ. ಪರಿಚಯಸ್ಥ ಯುವಕನೇ ನನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಪ್ರೇಕ್ಷಾ ತಿಳಿಸಿದ ಹಿನ್ನೆಲೆಯಲ್ಲಿ ಪ್ರೇಕ್ಷಾಳಿಗೆ ನಾವು ಬೆಂಗಳೂರಿಗೆ ತೆರಳಲು ಅನುಮತಿ ನೀಡಿದ್ದೆವು. ಈ ಹಿನ್ನೆಲೆ ಅವಳು ಸಾವನ್ನಪ್ಪುವ ಹಿಂದಿನ ದಿನವೇ ಬ್ಯೂಟಿಪಾರ್ಲರ್ ಹೋಗಿ ಫೇಷಿಯಲ್ ಮಾಡಿಸಿಕೊಂಡಿದ್ದಳು. ಆದರೆ ಗಾಂಜಾ ವ್ಯಸನಿ ಗೆಳೆಯ ಯತೀನ್‌ರಾಜ್ ಆಕೆ ಬೆಂಗಳೂರಿಗೆ ಹೋಗಬಾರದು ಎಂದು ಬೆದರಿಕೆ ಹಾಕಲು ಆರಂಭಿಸಿದ. ಇದನ್ನು ಆಕೆ ತನ್ನ ಸಹೋದರಿಯಲ್ಲಿ ಮಾತ್ರ ಹೇಳಿದ್ದಳು. ಬೇರೆ ಯಾರಿಗೂ ತಿಳಿದಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ಬೆಳಿಗ್ಗೆ 10.30ಕ್ಕೆ ಪ್ರೇಕ್ಷಾ ನನಗೆ ಕರೆ ಮಾಡಿ ಮಧ್ಯಾಹ್ನ ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದಳು. ಆದರೆ ಬಳಿಕ ನಡೆದದ್ದೆ ಬೇರೆ” ಎಂದು ತಂದೆ ಚಿತ್ತರಂಜನ್‌ ಹೇಳಿದ್ದಾರೆ.

ಇನ್ನು ಪ್ರೇಕ್ಷಾ ಮನೆಗೆ ಹಲವು ನಾಯಕರುಗಳು ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಅಂಗಾರ ಅವರು ಕೂಡಾ ಭೇಟಿ ನೀಡಿದ್ದು, ಈ ಪ್ರಕರಣದ ಹಿಂದೆ ಯಾರಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ. ನಾವು ಯಾರೂ ಕೂಡಾ ಯಾವ ಗಾಂಜಾದವರಿಗೂ ಹೆದರಬೇಕಾಗಿಲ್ಲ. ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

 

Vishwa News 24

Recent Posts

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  – vishwanews24

ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’  ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…

4 minutes ago

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

15 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

23 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

24 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

24 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

24 hours ago