ಮಂಗಳೂರು : ಪ್ರೇಮಿಯಿಂದ ಚೂರಿ ಇರಿತ : ವಿದ್ಯಾರ್ಥಿನಿಯ ಸ್ಥಿತಿ ಗಂಭೀರ -Vishwanews24
ಮಂಗಳೂರು,: ಯುವತಿಯ ಹತ್ಯೆಗೆ ಯತ್ನಿಸಿದ್ದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಾರ್ಕಳದ ನಿಟ್ಟೆಯಲ್ಲಿ ಎಂಬಿಎ ವಿದ್ಯಾರ್ಥಿನಿಯಾಗಿದ್ದ ದೇರಳಕಟ್ಟೆ ಬಗಂಬಿಲದ ನಿವಾಸಿ ದೀಕ್ಷಾಎಂಬಾಕೆಯ ಮೇಲೆ ನಗರದ ಶಕ್ತಿನಗರದ ರಾಮಶಕ್ತಿ ಮಿಷನ್ ಬಳಿಯ ನಿವಾಸಿ ಸುಶಾಂತ್ಎಂಬಾತನ ಮೇಲೆ ಚೂರಿಯಿಂದ ಇರಿದು ಆಕೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ. ವಿದ್ಯಾರ್ಥಿನಿ ಕಾಲೇಜು ಮುಗಿಸಿ ರಸ್ತೆಯಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿತ್ತು.
ದೀಕ್ಷಾ ಎಂದಿನಂತೆ ದೇರಳಕಟ್ಟೆಯ ಕ್ಷೇಮಾ ಬಸ್ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಯ ಹಿಂಭಾಗದಲ್ಲಿರುವ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಹಿಂದಿನಿಂದ ಬಂದ ಸುಶಾಂತ್ ಇದ್ದಕ್ಕಿದ್ದಂತೆ ಚಾಕುವಿನಿಂದ ಹಲ್ಲೆ ನಡೆಸಿದ್ದ.
ಆಕೆಯನ್ನು ಅಡ್ಡಗಟ್ಟಿದ್ದ ಆತ ೧೨ ಬಾರಿ ಇರಿದಿದ್ದ. ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ನರಳುತ್ತಿದ್ದರೂ, ಕನಿಕರ ತೋರದ ಆರೋಪಿ ಆಕೆಯನ್ನು ಪ್ರಶ್ನಿಸುತ್ತಲೇ 12 ಬಾರಿ ಮನಬಂದಂತೆ ಇರಿದ್ದ.
ಸ್ಥಳೀಯರು ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಿದ್ಯಾರ್ಥಿನಿ ದೀಕ್ಷಾ, ಎದೆ, ಹೊಟ್ಟೆ, ಕುತ್ತಿಗೆ ಕೈ ಕಾಲುಗಳು ಸೇರಿದಂತೆ ದೇಹದ 10-12 ಕಡೆ ಮಾರಕವಾಗಿ ಇರಿದ ಪರಿಣಾಮ ಹೃದಯ, ಕರುಳು ವಿಪರೀತಿ ಹಾನಿಯಾಗಿದೆ. ಗಂಭೀರ ಗಾಯಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ದೀಕ್ಷಾಳನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯಕ್ಕೆ ಆಸ್ಪತ್ರೆಯಿಂದ ಆರೋಪಿ ಸುಶಾಂತ್ನನ್ನು ಜೈಲ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಸುಶಾಂತ್ ಚೇತರಿಕೆಯಾಗುತ್ತಿದ್ದಾನೆ. ಆದರೆ ಯುವತಿಗೆ ಅತಿಯಾಗಿ ರಕ್ತಸ್ರಾವ ಹೋಗಿದ್ದು, ಈಗಾಗಲೇ ರಕ್ತ ನೀಡಲಾಗಿದೆ. ಆದರೂ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
