ಮಂಗಳೂರು: ಫಾಝಿಲ್ ಕೊಲೆ ಪ್ರಕರಣ ; ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು; ಫಾಝಿಲ್ ಕೊಲೆ ಪ್ರಕರಣ; ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಮಂಗಳೂರು: ಫಾಝಿಲ್ ಕೊಲೆ ಪ್ರಕರಣ ಆರೋಪಿಯೋರ್ವ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರು ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ಫಾಝಿಲ್‌ ಕೊಲೆ‌ ಪ್ರಕರಣದ 7ನೇ ಆರೋಪಿ ಅಜಿತ್ ಕ್ರಾಸ್ತಾ ಎಂಬಾತನು ಜಾಮೀನು ಕೋರಿ ಮಂಗಳೂರು ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಮಂಗಳಪೇಟೆ ನಿವಾಸಿ ಫಾಝಿಲ್ ಎಂಬ ಯುವಕನಿಗೆ‌ ದುಷ್ಕರ್ಮಿಗಳು ಅಟ್ಟಾಡಿಸಿ ಸಾರ್ವಜನಿಕ ಸ್ಥಳದಲ್ಲಿ ಕೊಲೆ ಮಾಡಿದ್ದರು.ಪ್ರಕರಣ ಜಿಲ್ಲೆಯಲ್ಲಿ ಭಾರೀ ಖಂಡನೆಗೆ ಕಾರಣವಾಗಿತ್ತು. ಫಾಝಿಲ್ ಹತ್ಯೆ ವೇಳೆ ಅಜಿತ್ ಕ್ರಾಸ್ತಾ ಕಾರು ಚಾಲಕನಾಗಿದ್ದ ಎನ್ನಲಾಗಿದೆ.

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಾ ಕುಳಾಯಿ ಅವರ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ ಪ್ರಕರಣ.. ಆರೋಪಿ ಕೆ.ಆರ್. ಶೆಟ್ಟಿಗೆ ಜಾಮೀನು ನಿರಾಕರಿಸಿದ ಕೋರ್ಟ್ – Vishwanews24

Leave a Reply