ಮಂಗಳೂರು ಬಾಂಬ್ ಪ್ರಕರಣ : ಯಾರು ಮಾಡಿದ್ರೂ ಅದು ತಪ್ಪು, ಅವರಿಗೆ ಕಾನೂನು ರೀತಿ ಶಿಕ್ಷೆಯಾಗತ್ತದೆ, ಈ ವಿಚಾರದಲ್ಲಿ ರಾಜಕೀಯ ಮಾಡೋದು ಹೇಯ ಕೃತ್ಯ : ಪ್ರಮೋದ್ ಮುತಾಲಿಕ್ -Vishwanews24
ಕೊಪ್ಪಳ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಹೇಯ ಕೃತ್ಯವಾಗಿದೆ. ಅದು ಆದಿತ್ಯ ರಾವ್ ಇರಬಹುದು,ಅಬ್ದುಲ್ ಇರಬಹುದು ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಶ್ರೀರಾಮನ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗುರುವಾರ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರು ಮಾಡಿದ್ರೂ ಅದು ತಪ್ಪು, ಅವರಿಗೆ ಕಾನೂನು ರೀತಿ ಶಿಕ್ಷೆಯಾಗತ್ತದೆ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡಿವೆ. ಬಿಜೆಪಿ ಸರ್ಕಾರ ಭಯೋತ್ಪಾದಕರನ್ನ ಒದ್ದು ಒಳಗೆ ಹಾಕುತ್ತಿದೆ. ಪ್ರಧಾನಿ ಮೋದಿ ಕೆಲಸಕ್ಕೆ ವಿರೋಧ ಮಾಡೋದು ವಿಪಕ್ಷಗಳ ನಿರ್ಲಜ್ಯ ಕೆಲಸವಾಗಿದೆ. ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಹೋರಾಟಕ್ಕೆ ಮುಸ್ಲಿಮರನ್ನು ಎತ್ತಿ ಕಟ್ಟಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ರಾಜಕೀಯ ನೆಲೆಗಾಗಿ ಪೌರತ್ವ ಕಾಯ್ದೆಯನ್ನ ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
