ಮಂಗಳೂರು : ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ದಿಯೇ ಅಜೆಂಡಾ. ಹಾಗಾಗಿ ಕೊರಗ ಸಮುದಾಯ ಸೇರಿದಂತೆ ನಿರ್ಲಕ್ಷ್ಯಕ್ಕೆ ಒಳಪಟ್ಟ, ತಳವರ್ಗದ ಅಭಿವೃದ್ಧಿಗೆ ಪೂರಕವಾಗಿ ಸಚಿವ ಸಂಪುಟ ಸಭೆಯಲ್ಲಿ ಆದ್ಯತೆ ದೊರೆಯಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ದುರ್ಬಲರು, ಬಡವರಿಗೆ ಒತ್ತು ನೀಡಿ ಮಾಡಿರುವುದು ಇತಿಹಾಸ ಎಂದವರು ಹೇಳಿದರು.
ಇದನ್ನೂ ಓದಿ :
ಮೂಲ ನಿವಾಸಿ ಕೊರಗರು ತೀರಾ ದುರ್ಬಲರು, ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯಪ್ಪ ಅವರು ಕೊರಗರ ಕಾಲನಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಅನುಕೂಲ ರೂಪಿಸಿದ್ದರು. ಮುಹಮ್ಮದ್ ಪೀರ್ ವರದಿಯ ಮೂಲಕ ಕಾಂಗ್ರೆಸ್ ಸರಕಾರ ಅವರ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಿದ್ದು, ಇನ್ನುಳಿದ ಅಗತ್ಯ ಸವಲತ್ತು, ಬೇಡಿಕೆಗಳ ಈಡೇರಿಕೆಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರಮ ವಹಿಸಲಿದೆ ಎಂದು ಅವರು ಹೇಳಿದರು.
ಡಿಸಿ ಮನ್ನಾ ಭೂಮಿ ಇತ್ಯರ್ಥಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂಬ ಬಗ್ಗೆ ಮನವಿಯನ್ನು ಸಲ್ಲಿಸಲಾಗುವುದು. ಕಾಂಗ್ರೆಸ್ ಸರಕಾರದ ಭೂ ಮಸೂದೆ ಕಾಯಿದೆ ಮೂಲಕ ಅತೀ ಹೆಚ್ಚು ಫಲಾನುಭವಿಗಳಾದವರು ದ.ಕ. ಜಿಲ್ಲೆಯವರು. ಬ್ಯಾಂಕ್ ರಾಷ್ಟ್ರೀಕರಣದ ಫಲಿತಾಂಶವೂ ಜಿಲ್ಲೆಯ ಜನರಿಗೆ ಹೆಚ್ಚು ದೊರಕಿದೆ. 94 ಸಿ, ಬಗರ್ ಹುಕುಂ ಮೂಲಕ ಅತೀ ಹೆಚ್ಚು ಫಲಾನುಭವಿಗಳು ದ.ಕ. ಜಿಲ್ಲೆಯವರಾಗಿದ್ದರೆ, ಅದರಲ್ಲೂ ಬಂಟ್ವಾಳವು ರಾಜ್ಯದಲ್ಲೇ ನಂ. 1 ಆಗಿತ್ತು. ಕಾಗೋಡು ತಿಮ್ಮಪ್ಪ ಅವರ ಕಾಲದಲ್ಲಿ 5 ಸೆಂಟ್ಸ್ ನೀಡಲಾಗುತ್ತಿದ್ದ ಸರಕಾರಿ ಭೂಮಿಯನ್ನು 9 ಸೆಂಟ್ಸ್‌ಗೆ ಏರಿಕೆ ಮಾಡಲಾಗಿತ್ತು. ಇವೆಲ್ಲವೂ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವವರಿಗೆ ಇತಿಹಾಸದಲ್ಲಿ ಆದ ಅಭಿವೃದ್ಧಿಯ ದಾಖಲೆಗಳು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಇದನ್ನೂ ಓದಿ :
ಕಾರ್ಕಳ : ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರಕ್ಕೆ ಚಾಲನೆ ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ…
ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಕೂಡಿಗೆ ಸಮೀಪದ ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ…
ಮಂಗಳೂರು : ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ ಮಂಗಳೂರು : ಗಣೇಶ ಚತುರ್ಥಿದಂದು…
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿ ಅಭಿವೃದ್ಧಿಗೆ ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ ಉಡುಪಿ:…
ಮಂಗಳೂರು: ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ ಪರಿಶೀಲನೆ ಮಂಗಳೂರು: ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ರ…
ವೀಸಾ ಅವಧಿ ಮುಗಿದು 7 ತಿಂಗಳಾದರೂ ಅಕ್ರಮ ವಾಸ : ಇಸ್ರೇಲ್ ಪ್ರಜೆಯನ್ನ ವಶಕ್ಕೆ ಪಡೆದ ಹೊನ್ನಾವರ ಪೊಲೀಸರು ಕಾರವಾರ:…