Featured

ಮಂಗಳೂರು : ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ – vishwanews24

ಮಂಗಳೂರು : ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ

ಮಂಗಳೂರು : ಗಣೇಶ ಚತುರ್ಥಿದಂದು ನಡೆದ ಬೈಕ್ – ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಯುವಕ ವರ್ಷಿತ್ ಕುಲಾಲ್ ಎಂದು ಗುರುತಿಸಲಾಗಿದ್ದು, ಈತ ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿಗಳಾದ ಗೋಪಾಲ ಮತ್ತು ವೇದಾವತಿ ದಂಪತಿಯ ಕಿರಿಯ ಮಗ. ಈತ ಅವಿವಾಹಿತನಾಗಿದ್ದು, ಫ್ಯಾಬ್ರಿಕೇಶನ್ ಕೆಲಸದಲ್ಲಿ ಉದ್ಯೋಗದಲ್ಲಿದ್ದ.

ಸೋಮವಾರ ಸಂಜೆ 7:30 ರ ಸುಮಾರಿಗೆ ವರ್ಷಿತ್ ಅವರು ಕುತ್ತಾರುವಿನಿಂದ ಮನೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಕೊರಗಜ್ಜನ ಆದಿಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್‌ಗೆ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವರ್ಷಿತ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದಾರೆ.

ವೈದ್ಯರ ಸಲಹೆಯನ್ನು ವೈದ್ಯರ ಸಲಹೆಯಂತೆ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಡಿಕ್ಕಿಯಲ್ಲಿ ಸ್ಕೂಟರ್ ಸವಾರ ಧೀರಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರ್ಷಿತ್ ತನ್ನ ಹೆತ್ತವರು ಮತ್ತು ಒಬ್ಬ ಅಣ್ಣನನ್ನು ಅಗಲಿದ್ದಾನೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ – vishwanews24

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ‘ವಂದೇ ಮಾತರಂ’ ಪೂರ್ತಿಯಾಗಿ ಹಾಡಲು ಬರುವುದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ…

2 minutes ago

ತುಳು ಭಾಷೆಗೆ ಈ ಬಾರಿ ಮಾನ್ಯತೆ ಸಿಗುವುದು ಖಂಡಿತ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24

ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗುತ್ತದೆ ಎನ್ನುವ ವಿಶ್ವಾಸವಿದೆ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ : ಮಂಗಳೂರಿನಲ್ಲಿ…

18 minutes ago

ಕಾರ್ಕಳ : ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರಕ್ಕೆ ಚಾಲನೆ – vishwanews24

ಕಾರ್ಕಳ : ಕಂಬಳ ಓಟಕ್ಕೆ ಆಯ್ಕೆಗೊಂಡವರ ತರಬೇತಿ ಶಿಬಿರಕ್ಕೆ ಚಾಲನೆ ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ…

26 minutes ago

ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು – vishwanews24

ಹಾಸನ: ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಕೂಡಿಗೆ ಸಮೀಪದ ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ…

33 minutes ago

ಮಂಗಳೂರು : ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ದಿಯೇ ಅಜೆಂಡಾ : ರಮಾನಾಥ ರೈ – vishwanews24

ಮಂಗಳೂರು : ಬಿಜೆಪಿಗೆ ಚುನಾವಣೆಯೇ ಅಜೆಂಡಾ ಆಗಿದ್ದರೆ, ಕಾಂಗ್ರೆಸ್‌ಗೆ ಅಭಿವೃದ್ದಿಯೇ ಅಜೆಂಡಾ : ರಮಾನಾಥ ರೈ ಮಂಗಳೂರು : ಬಿಜೆಪಿಗೆ…

42 minutes ago

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ – vishwanews24

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ  : ಕರಾವಳಿ ಅಭಿವೃದ್ಧಿಗೆ  ಹೊಸ ಬಲ ನೀಡಲಿದೆ : ಪ್ರಸಾದ್ ರಾಜ್ ಕಾಂಚನ್ ಉಡುಪಿ:…

2 hours ago