ಮಂಗಳೂರು: ಮಳಲಿಪೇಟೆಯಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಆರಾಧನೆ ಮಾಡುತ್ತಿದ್ದ ಮಸೀದಿಯನ್ನು ನವೀಕರಣ ಕಾರ್ಯಕ್ಕಾಗಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಆ ಮಸೀದಿಯ ರಚನೆ ಮಂದಿರಕ್ಕೆ ಹೋಲಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಕೊಂಡು ಬಜರಂಗದಳದ ಗೂಂಡಾ ನಾಯಕ ಶರಣ್ ಪಂಪ್ವೆಲ್ ಎಂಬವನ ನೇತೃತ್ವದಲ್ಲಿ ಸಂಘಪರಿವಾರ ಮಸೀದಿಯೊಳಗೆ ಹೋಗಿ ರಾದ್ದಾಂತವನ್ನು ಉಂಟು ಮಾಡಿ ಈ ವಿವಾದ ಸೃಷ್ಟಿಸಿದ್ದು ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಎಸ್‌ಡಿಪಿಐ ಆರೋಪಿಸಿದೆ.
ಮಳಲಿಪೇಟೆಯ ಪುರಾತನ ಮಸೀದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದ್ದರೂ ಅವೆಲ್ಲವನ್ನೂ ಗಾಳಿಗೆ ತೂರಿ ತಾಂಬೂಲ ಎಂಬ ನಾಟಕೀಯ ವಿಧ್ಯಮಾನವನ್ನು ಸೃಷ್ಟಿಸಿ ಜನರೆಡೆಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬುವ ಮೂಲಕ ಸಮಾಜದಲ್ಲಿ ಕೋಮುಗಳ ಮಧ್ಯೆ ಬಿರುಕು ಹುಟ್ಟಿಸಿ ದ್ವೇಷ ಹರಡಿಸಲು ನಡೆಸಿದ ಸಂಚಾಗಿದೆ.
ಸಂಘಪರಿವಾರಕ್ಕೆ ತಾಂಬೂಲ ಮಾಡಲು ಅವಕಾಶ ನೀಡಿರುವುದು ಜಿಲ್ಲಾಡಳಿತದ ಮತ್ತೊಂದು ವೈಫಲ್ಯವಾಗಿದೆ.
ವಿವಾದ ನಡೆದ ತಕ್ಷಣ ಅದರ ದಾಖಲೆ ಪರಿಶೀಲಿಸಿ ವಿವಾದವನ್ನು ತಕ್ಷಣ ಪರಿಹರಿಸಿಕೊಡಬೇಕಾಗಿದ್ದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ನಿಷ್ಕ್ರಿಯವಾಗಲು ಕಾರಣವೇನು? ಮಸೀದಿ ನವೀಕರಣಕ್ಕೆ ತಡೆಯೊಡ್ಡಿದ ಜಿಲ್ಲಾಡಳಿತಕ್ಕೆ ಮಂದಿರದ ಬಗ್ಗೆ ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ತಡೆ ನೀಡಲು ಯಾಕೆ ಸಾಧ್ಯವಾಗಿಲ್ಲ?
ತಾಂಬೂಲ, ಜ್ಯೋತಿಷ್ಯ ಇತ್ಯಾದಿಗಳ ಹಿಂದೆ ಹೋಗಿ ಜನರನ್ನು ಮರಳು ಮಾಡುವುದಾದರೆ ಇಲ್ಲಿ ಕಾನೂನು, ಕೋರ್ಟ್, ಕಚೇರಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಇತ್ಯಾದಿ ಯಾಕಿದೆ? ಸದಾ ದ್ವೇಷವನ್ನು ಬಿತ್ತುವುದರಲ್ಲೇ ಕಳೆಯುವ ಗೂಂಡಾ ಶರಣ್ ಪಂಪ್ವೆಲ್‌ನ ವಿರುದ್ಧ ಜಿಲ್ಲಾಡಳಿತ ಯಾಕೆ ಮೌನವಾಗಿದೆ?
ಸಂಘಪರಿವಾರ ಈ ವಿಚಾರದಲ್ಲಿ ಇನ್ನು ಮುಂದೆ ವಿವಾದ ಎಬ್ಬಿಸಿದರೆ ಜಿಲ್ಲೆಯ ಮುಸ್ಲಿಮರು ಮೌನವಾಗಿರಲು ಸಾಧ್ಯ ವಿಲ್ಲ. ಇಲ್ಲಿನ ಯಾವುದೇ ಮಂದಿರವಾಗಲಿ, ಮಸೀದಿಯಾಗಲಿ, ಚರ್ಚ್ ಅಥವಾ ಇನ್ನಿತರ ಆರಾಧನಾಲಯಗಳ ವಿರುದ್ದ ಷಡ್ಯಂತ್ರ ರೂಪಿಸಿದರೆ ಅವೆಲ್ಲದರ ವಿರುದ್ಧ ಎಸ್‌ಡಿಪಿಐ ಹೋರಾಟ ನಡೆಸಲಿದೆ.
ಹಾಗಾಗಿ ಈ ವಿವಾದವನ್ನು ತಕ್ಷಣ ಜಿಲ್ಲಾಡಳಿತ ಮೌನ ಮುರಿದು ಇತ್ಯರ್ಥಗೊಳಿಸಬೇಕು. ಇಂತಹ ಷಡ್ಯಂತ್ರಗಳ ಮೂಲಕ ಸಮಾಜದ ತಾಳ್ಮೆಯನ್ನು ಪರೀಕ್ಷೆಸುವ ಕೆಲಸಕ್ಕೆ ಕೈ ಹಾಕದಿರಿ.
ಇದರಿಂದ ಜಿಲ್ಲೆಯ ಶಾಂತಿ ಕದಡಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…
ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್‌ನಿಂದ ಅಕಸ್ಮಾತ್ತಾಗಿ ಬೆಂಕಿ…
ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ…
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…