ಮಂಗಳೂರು ಮಹಿಳೆಯ ಭೀಕರ ಹತ್ಯೆ : ಆರೋಪಿಗಳು ಪೊಲೀಸ್ ವಶಕ್ಕೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಗರವನ್ನು ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ(35) ಹತ್ಯೆ ಪ್ರಕರಣವನ್ನು ಮೂರು ದಿವಸಗಳ ಒಳಗೆ ಪೊಲೀಸರು ಬೇಧಿಸಿದ್ದು, ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ತನಿಖೆಗೆ ಇಳಿದಿದ್ದ 30 ಪೊಲೀಸ್ ಅಧಿಕಾರಿಗಳ ಮೂರು ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಗಳಾದ ಜಾನ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಎನ್ನುವವರನ್ನು ಬಂಧಿಸಿದ್ದಾರೆ.

ಶ್ರೀಮತಿ ಶೆಟ್ಟಿಯಿಂದ ಜೋನಸ್ ಜೂಲಿನ್ ಸಾಲದ ರೂಪದಲ್ಲಿ ಹಣ ಪಡೆದಿದ್ದು, ಸ್ವಲ್ಪ ಬಾಕಿ ತೀರಿಸಿದ್ದರು . ಬಾಕಿ ಉಳಿದ ಹಣವನ್ನು ಶ್ರೀಮತಿ ಶೆಟ್ಟಿ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದರು ಹಣ ನೀಡಿದರಲಿಲ್ಲ. ಮೇ. 11 ರಂದು ಹಣ ವಾಪಾಸು ಪಡೆಯುವ ದೃಷ್ಟಿಯಿಂದ ಜೋನಸ್ ಜೂಲಿನ್ ಮನೆಗೆ ತೆರಳಿದ್ದು, ಆಗ ಶ್ರೀಮತಿ ಶೆಟ್ಟಿಯವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಈ ಸಂದರ್ಭ ಆರೋಪಿಯ ಪತ್ನಿಯೂ ಸಹಕಾರ ನೀಡಿರುವುದು ತಿಳಿದುಬಂದಿದೆ.

ಹಣಕಾಸು ವ್ಯವಹಾರದ ವೈಷಮ್ಯದಿಂದ ಕೊಲೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಹೋದ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪತ್ನಿ ಕೊಲೆಗೆ ಸಹಕಾರ ನೀಡಿರುವ ಆರೋಪವಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಶೆಟ್ಟಿಯವರ 8 ಚಿನ್ನದ ಉಂಗುರ ಹಾಗೂ 1 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ