ಮಂಗಳೂರು : ಮಹಿಳೆ ಅಸ್ವಸ್ಥ – ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ  – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಮಹಿಳೆ ಅಸ್ವಸ್ಥ – ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ 

ಕೊಣಾಜೆ: ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ ನಲ್ಲಿ ಅಸ್ವಸ್ಥಗೊಂಡ ಮಹಿಳೆಯೊಬ್ಬರನ್ನು ಬಸ್ ನ ಚಾಲಕ, ನಿರ್ವಾಹಕ ನೇರವಾಗಿ ಬಸ್ಸನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ವಿಟ್ಲದಿಂದ ಮಂಗಳೂರು ಕಡೆಗೆ ಹೊರಟಿದ್ದ ಮೆರ್ಸಿ ಬಸ್ನಲ್ಲಿ ಮಹಿಳೆಯೋರ್ವರು ಮುಡಿಪುಗೆ ಟಿಕೆಟ್ ತೆಗೆದುಕೊಂಡಿದ್ದು, ಬಸ್ಸು ಮುಡಿಪು ಬಸ್ಸು ನಿಲ್ದಾಣಕ್ಕೆ ಬಂದಾಗ ಮಹಿಳೆ ಇಳಿದಿರಲಿಲ್ಲ. ಕೂಡಲೇ ಪ್ರಯಾಣಿಕರೋರ್ವರು ಆ ಮಹಿಳೆ ಅಸ್ವಸ್ಥ ರಾಗಿ ಕುಸಿದು ಬಿದ್ದಿರುವುದನ್ನು ಬಸ್ಸು ನಿರ್ವಾಹಕರಾದ ಯಾಕೂಬ್ ಅವರ ಗಮನಕ್ಕೆ ತಂದಿದ್ದಾರೆ.

ಉಡುಪಿ : ಹಾಡುಹಗಲೇ ಕಳ್ಳತನ – ಚಿನ್ನದ ಸರ ಕಿತ್ತು ಪರಾರಿ :ಪ್ರಕರಣ ದಾಖಲು – vishwanews24

ತಕ್ಷಣ ಕಾರ್ಯಪ್ರವೃತ್ತರಾದ ಯಾಕೂಬ್, ಚಾಲಕ ಸವಾದ್ ರ ಬಳಿ ಬಸ್ಸನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ಮನವಿ ಮಾಡಿದ್ದು, ಅದರಂತೆ ಚಾಲಕ ಸವಾದ್ ಕಣಚೂರು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬಸ್ಸನ್ನು ಚಲಾಯಿಸಿ ನೆರವಾಗಿದ್ದಾರೆ.

ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಘಟನೆಯ ತುಣುಕುಗಳು ಸೆರೆಯಾಗಿವೆ. ಮಹಿಳೆಯು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ತಂದೆಯಿಂದ ನಿರಂತರ ಅತ್ಯಾಚಾರ ; ಗರ್ಭ ಧರಿಸಿದ 14 ವರ್ಷದ ಮಗಳು – vishwanews24

Leave a Reply