ಮಂಗಳೂರು: ಮಾ. 21  ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ  ಮತ್ತು ಸಾಮರಸ್ಯ ಸಂಗಮ ; ಉದ್ಘಾಟಕರಾಗಿ ಆಗಮಿಸಲಿದ್ದಾರೆ‌ ಹೆಚ್ ಡಿ ಕುಮಾರಸ್ವಾಮಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಾ. 21  ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ  ಮತ್ತು ಸಾಮರಸ್ಯ ಸಂಗಮ ಉದ್ಘಾಟಕರಾಗಿ ಆಗಮಿಸಲಿದ್ದಾರೆ‌ ಹೆಚ್ ಡಿ ಕುಮಾರಸ್ವಾಮಿ -Vishwanews24

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾ ದಳ ಮಹಿಳಾ ಘಟಕದ ವತಿಯಿಂದ ಮಾರ್ಚ್ 21 ರಂದು ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ  ಮತ್ತು ಸಾಮರಸ್ಯ ಸಂಗಮ ಮಂಗಳೂರಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ‌.

ಮಾರ್ಚ್ 21 ರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಕದ್ರಿ ಪಾರ್ಕ್ ಸರ್ಕ್ಯೂಟ್ ಹೌಸ್ ಬಳಿ ಇರುವ ಲಯನ್ಸ್ ಅಶೋಕ ಸೇವಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗಮಿಸಲಿದ್ದಾರೆ.

ಇದನ್ನೂ ಓದಿ : ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ನಿರಂಜನ್ ಭಟ್ ಜಾಮೀನು ಅರ್ಜಿ ತಿಂಗಳೊಳಗೆ ಇತ್ಯರ್ಥಪಡಿಸಲು ಸುಪ್ರೀಂ ಸೂಚನೆ -Vishwanews24

ಮುಖ್ಯ ಅತಿಥಿಗಳಾಗಿ ಮಹಿಳಾ ಘಟಕ ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷೆ ಲೀಲಾವತಿ ಆರ್.ಪ್ರಸಾದ್, ಬಿ.ಎಂ. ಫಾರೂಕ್, ರೂತ್ ಮನೋರಮ, ಬಿ.ಬಿ ನಿಂಗಯ್ಯ, ಎಸ್.ಎಲ್ ಭೋಜೇಗೌಡ ಸೇರಿ ಇನ್ನಿತರ ಗಣ್ಯ ಅತಿಥಿಗಳು ಆಗಮಿಸಲಿದ್ದಾರೆ.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಪಕ್ಷದಿಂದ ವಿಜೇತರಾದ ಗ್ರಾಮ ಪಂಚಾಯತ್ ಸದಸ್ಯರನ್ನು ಸನ್ಮಾನಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಚೂಡಮಣಿ,ವೀಣಾ ಜಯಂತ ಶೆಟ್ಟಿ, ಶ್ರೀಮಣಿ ಆರ್ ಶೆಟ್ಟಿ, ಕವಿತಾ, ಸುಕನ್ಯಾ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮಣಿಪಾಲ : MIT ಕಾಲೇಜಿನಲ್ಲಿ 52 ವಿದ್ಯಾರ್ಥಿಗಳಿಗೆ ಕೊರೊನಾ ದೃಢ ; ಕಾಲೇಜು ಕ್ಯಾಂಪಸ್​ ಈಗ ಕಂಟೇನ್ಮೆಂಟ್ ಜೋನ್ -Vishwanews24