ಮಂಗಳೂರು : ಮೂಲ್ಕಿಯಿಂದ ಉಡುಪಿವರೆಗೂ ಆಂಬುಲೆನ್ಸ್​ಗೆ ದಾರಿ ಬಿಡದೆ ಪುಂಡಾಟ ಮೆರೆದ ಕಾರು ಚಾಲಕ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ಆಂಬುಲೆನ್ಸ್​ಗೆ ದಾರಿ ಬಿಡದೆ ಪುಂಡಾಟ ಮೆರೆದ ಕಾರು ಚಾಲಕ

40 ಕಿ.ಮೀ. ವರೆಗೂ ದಾರಿ ಬಿಡದೆ ಉದ್ಧಟತನ ಪ್ರದರ್ಶಿದ ಕಾರು ಚಾಲಕ

ಮಂಗಳೂರು: ಕಾರು ಚಾಲಕನೊಬ್ಬ ಆಂಬುಲೆನ್ಸ್​ಗೆ ಸುಮಾರು 40 ಕಿ.ಮೀ. ವರೆಗೂ ದಾರಿ ಬಿಡದೆ ಪುಂಡಾಟ ಮೆರೆದಿದ್ದಾನೆ.

ನಿನ್ನೆ(ಬುಧವಾರ) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಉತ್ತರ ಕನ್ನಡದ ಭಟ್ಕಳಕ್ಕೆ ರೋಗಿಯನ್ನು ಕರೆದುಕೊಂಡು ಆಂಬುಲೆನ್ಸ್​ ಹೋಗುತ್ತಿತ್ತು.

ಈ ವೇಳೆ KA19 MD6843 ನಂಬರ್ ಪ್ಲೇಟ್ ಹಾಕಿದ್ದ ಕಾರು ಚಾಲಕನೊಬ್ಬ ಆಂಬುಲೆನ್ಸ್‌ಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಮೂಲ್ಕಿಯಿಂದ ಉಡುಪಿವರೆಗೂ ಆಂಬುಲೆನ್ಸ್‌ ಮುಂದೆಯೇ ಸಂಚರಿಸುತ್ತಾ ದಾರಿ ಬಿಡದೆ ಉದ್ಧಟತನ ಪ್ರದರ್ಶಿಸಿದ್ದಾನೆ.

SSLC ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ – Vishwanews24

ಅಷ್ಟೇ ಅಲ್ಲ, ಅಂದು ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಮತ್ತೊಂದು ಆಂಬುಲೆನ್ಸ್‌ಗೂ ಇದೇ ಕಾರು ಅಡ್ಡ ಬಂದು ತೊಂದರೆ ಕೊಟ್ಟಿದೆ.

ಆಂಬುಲೆನ್ಸ್​ಗಳಿಗೆ ದಾರಿ ಬಿಡುವ ಮೂಲಕ ಅಪಾಯದಲ್ಲಿರುವವರ ಪ್ರಾಣ ಉಳಿವಿಗೆ ನೆರವಾಗುವುದು ಪ್ರತಿಯೊಬ್ಬರ ಜವಾಬ್ದಾರಿ. ಟ್ರಾಫಿಕ್​ ಪೊಲೀಸರು ಕೂಡ ಆಂಬುಲೆನ್ಸ್​ನ ಸುಗಮ ಸಂಚಾರಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾ ಪದೇಪದೆ ಅರಿವು ಮೂಡಿಸುತ್ತಿದ್ದಾರೆ. ಆದರೆ, ಈ ಕಾರು ಚಾಲಕ ಮಾತ್ರ ಅಮಾನವೀಯವಾಗಿ ವರ್ತಿಸುತ್ತಾ ಪುಂಡಾಟ ಮೆರೆದಿದ್ದಾನೆ. ಈ ಕಾರು ಚಾಲಕನ ವರ್ತನೆಯನ್ನ ಆಂಬುಲೆನ್ಸ್​ ಸಿಬ್ಬಂದಿಯೇ ವಿಡಿಯೋ ಮಾಡಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಉಡುಪಿ : ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು : ಅಮೃತ್‌ ಶೆಣೈ – Vishwanews24

Leave a Reply