ಮಂಗಳೂರು: ಯುವತಿಯೊಂದಿಗೆ ಪ್ರಯಾಣಿಸಿದ ಅನ್ಯಕೋಮಿನ ವಿದ್ಯಾರ್ಥಿಗೆ ಹಲ್ಲೆ : ಯುವಕನಿಂದ ದೂರು – Vishwanews24
ಮಂಗಳೂರು: ಯುವತಿಯೊಂದಿಗೆ ಪ್ರಯಾಣಿಸಿದ ಅನ್ಯಕೋಮಿನ ವಿದ್ಯಾರ್ಥಿಗೆ ಹಲ್ಲೆ : ಯುವಕನಿಂದ ದೂರು
ಮಂಗಳೂರು: ಕಾರ್ಕಳ-ನಿಟ್ಟೆಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್ನಲ್ಲಿ ಯುವತಿಯೊಂದಿಗೆ ಬಸ್ನಲ್ಲಿ ಒಂದೇ ಸೀಟಿನಲ್ಲಿ ಕುಳಿತು ಪ್ರತಿ ದಿನ ಪ್ರಯಾಣಿಸಿದ್ದ ಎಂದು ಆರೋಪಿಸಿ ಯುವಕರ ತಂಡವೊಂದು ವಿದ್ಯಾರ್ಥಿ ಸೈಯದ್ ರಶೀಮ್ ಉಮರ್ (20) ಎಂಬಾತನಿಗೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ರಶೀಮ್ಗೆ 3-4 ಮಂದಿ ಅಪರಿಚಿತರ ತಂಡವೊಂದು ನ. 24ರ ಸಂಜೆ ನಂತೂರಿನಲ್ಲಿ ಬಸ್ಸಿನಿಂದ ಎಳೆದು ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ಕರ್ತವ್ಯ ನಿರತ ಸಂಚಾರಿ ಪೊಲೀಸರು ಆಗಮಿಸಿ ಘಟನೆಯನ್ನು ತಡೆದಿದ್ದಾರೆ.
ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Appropriate action is being taken regarding this incident https://t.co/z5fSTqS7Mo
— alok kumar (@alokkumar6994) November 25, 2022
