ಮಂಗಳೂರು : ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿ ಹಣ ದೋಚಿದ್ದಆರೋಪಿಗಳ ಬಂಧನ -Vishwanews24
ಮಂಗಳೂರು : ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿ ಹಣ ದೋಚಿದ್ದಆರೋಪಿಗಳ ಬಂಧನ -Vishwanews24
ಮಂಗಳೂರು: ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯೊಂದಿಗ ಅಸಭ್ಯವಾಗಿ ವರ್ತಿಸಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಿಹಾರ ಮೂಲದ ಅರರಿಯಾ ಜಿಲ್ಲೆಯ ಅಜಯ್ ಕುಮಾರ್ ಹಾಗೂ ಸುಭೋದ್ ಕುಮಾರ್ ಎಂದು ಗುರುತಿಸಲಾಗಿದೆ.
ಜೋಕಟ್ಟೆಯ ಸಂಕದಡಿಯ ಹೊಸಮನೆಯ ನಿವಾಸಿಯಾಗಿದ್ದ ಯುವತಿ ಮಾರ್ಚ್ 23 ರಂದು ರಾತ್ರಿ 7.30ಕ್ಕೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮನೆಯ ಬಳಿ ಅಪರಿಚಿತರಿಬ್ಬರು ಅವರನ್ನು ಬಿಗಿಯಾಗಿ ಹಿಡಿದು ಅಸಭ್ಯವಾಗಿ ವರ್ತಿಸಿ ಅವರ ಕೈಯಲ್ಲಿದ್ದ 1 ಸಾವಿರ ಹಣವಿದ್ದ ಪರ್ಸ್’ನ್ನು ದೋಚಿದ್ದ ಬಗ್ಗೆ ದೂರು ದಾಖಲಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಬಿಹಾರ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಮಾರ್ಚ್ 31 ರೊಳಗೆ ಪಾನ್, ಆಧಾರ್ ಕಾರ್ಡ್ ಲಿಂಕ್ ಮಾಡಿ.. -Vishwanews24
