ಮಂಗಳೂರು: ರಾಘವೇಂದ್ರ ಆಚಾರ್ ಕೊಲೆ ಪ್ರಕರಣ – ಆರೋಪಿಯ ಮತ್ತೊಂದು ಫೋಟೋ ಬಿಡುಗಡೆ ಮಾಡಿದ ಪೊಲೀಸರು – Vishwanews24

Featured, ಉಡುಪಿ

ಮಂಗಳೂರು: ರಾಘವೇಂದ್ರ ಆಚಾರ್ ಕೊಲೆ ಪ್ರಕರಣ – ಆರೋಪಿಯ ಮತ್ತೊಂದು ಫೋಟೋ ಬಿಡುಗಡೆ ಮಾಡಿದ ಪೊಲೀಸರು

ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ದುಷ್ಕರ್ಮಿಯ ಇನ್ನಷ್ಟು ಚಿತ್ರಗಳನ್ನು ಪೊಲೀಸರು ಫೆ.10, ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಹಂಪನಕಟ್ಟೆ ಮಿಲಾಗ್ರಿಸ್ ಬಳಿ ಫೆ.3ರಂದು ಚಿನ್ನಾಭರಣ ಅಂಗಡಿಯಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ (55) ಅಪರಿಚಿತ ದುಷ್ಕರ್ಮಿ ಇರಿದ ಪರಿಣಾಮ ಮೃತಪಟ್ಟಿದ್ದರು. ಘಟನೆ ನಡೆದಾಗ ಅಂಗಡಿಯಲ್ಲಿ ಅವರೊಬ್ಬರೇ ಇದ್ದರು.

ಕಾಂಗ್ರೆಸ್ ಆಂತರಿಕ ಸಮೀಕ್ಷೆ ಪ್ರಕಾರ ದಕ್ಷಿಣ ಕನ್ನಡ, ಉಡುಪಿಯಲ್ಲಿ 10 ಸ್ಥಾನ ಗೆಲ್ಲುತ್ತೇವೆ : ಡಿಕೆ ಶಿ – Vishwanews24

ಮುಸುಕುಧಾರಿಯೊಬ್ಬ ಅಂಗಡಿಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಧ್ಯಾಹ್ನದ ಊಟ ಮುಗಿಸಿ ಅಂಗಡಿಗೆ ಹಿಂತಿರುಗಿದಾಗ ಅಂಗಡಿ ಮಾಲಕರು ಘಟನೆ ಬಗ್ಗೆ ತಿಳಿದುಕೊಂಡಿದ್ದರು.

ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿಬೇಕಾದ ಪೊಲೀಸ್ ಅಧಿಕಾರಿಗಳು:

ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333,

ಮಹೇಶ್ ಕುಮಾರ್ , ಎಸಿಪಿ ಕೇಂದ್ರ ಉಪವಿಭಾಗ, ಮಂಗಳೂರು ನಗರ – ಮೊ: 9480805320

Leave a Reply