Featured

ಮಂಗಳೂರು: ರೈಲಿನಡಿಗೆ ಬಿದ್ದು ನವವಿವಾಹಿತ ಸಾವು – Vishwanews24

ಮಂಗಳೂರು: ರೈಲಿನಡಿಗೆ ಬಿದ್ದು ನವವಿವಾಹಿತ ಸಾವು

ಮಂಗಳೂರು : ಚಲಿಸುತ್ತಿರುವ ರೈಲಿನಡಿಗೆ ಬಿದ್ದು ಯುವಕನೋರ್ವ ಸಾವನಪ್ಪಿರುವ ಘಟನೆ ಎಕ್ಕೂರು ಜಪ್ಪು ಬಪ್ಪಲ್ ಸಮೀಪ ನಿನ್ನೆ ಮುಂಜಾನೆ ನಡೆದಿದೆ.

ಮೃತರನ್ನು ಜಪ್ಪಿನಮೊಗರು ತಂದೊಳಿಗೆ ನಿವಾಸಿ ಧೀರಜ್( 32) ಎಂದು ಗುರುತಿಸಲಾಗಿದೆ. ಈತನಿಗೆ 10 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಜಪ್ಪುವಿನಲ್ಲಿ ಪತ್ನಿಯೊಂದಿಗೆ ವಾಸವಿದ್ದರು.

ಬೆಳಗ್ಗೆ 6.50ಕ್ಕೆ ಮನೆಯಿಂದ ಹೊರಟು ಬಂದಿದ್ದು, ಸುಮಾರು 7 ಗಂಟೆಯ ವೇಳೆಗೆ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. ಮುಂಜಾವಿನ ವೇಳೆ ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಧೀರಜ್ ಅವರು ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ಹಣಕಾಸಿನ ವಿಷಯಗಳಲ್ಲಿ ಎಚ್ಚರ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

 

Vishwa News 24

Recent Posts

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ – vishwanews24

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…

9 hours ago

ರೇಷನ್ ಕಾರ್ಡ್​ ಇ-ಕೆವೈಸಿ ದಿನಾಂಕ ವಿಸ್ತರಣೆ: ಸರ್ಕಾರದಿಂದ ಮಹತ್ವದ ಆದೇಶ – vishwanews24

ರಾಜ್ಯ ಸರ್ಕಾರ ಪಡಿತರ ಕಾರ್ಡ್​ದಾರರಿಗೆ ಬಿಗ್ ಗುಡ್​ ನ್ಯೂಸ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ…

9 hours ago

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ : ಇನ್ಸ್‌ಪೆಕ್ಟರ್‌ ಯಾವುದೇ ತಪ್ಪು ಮಾಡಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24

ಇನ್ಸ್‌ಪೆಕ್ಟರ್‌ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ  ತಪ್ಪೇ ಮಾಡದ ಇನ್ಸ್‌ಪೆಕ್ಟರ್‌ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…

9 hours ago

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ – vishwanews24

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…

10 hours ago

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ – vishwanews24

'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…

11 hours ago

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ  : ಚಾಲಕನ ನಿಯಂತ್ರಣ…

12 hours ago