ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ -vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀ ರಾಮ ಸೇನೆಯು ಸಹಾಯವಾಣಿ ಆರಂಭಿಸಿದೆ. ದಿನದ 24 ಗಂಟೆ ಕಾರ್ಯನಿರ್ವಹಣೆ ನಡೆಸಲಾಗುವುದು, ಕಾನೂನು ಸಲಹೆ ಲಭ್ಯವಿರುತ್ತದೆ ಎಂದು ಶ್ರೀರಾಮ ಸೇನೆ ಮಾಹಿತಿ ನೀಡಿದೆ.

9090443444 ದೂರವಾಣಿ ಸಂಖ್ಯೆಯ ಸಹಾಯವಾಣಿ ಅರಂಭಿಸಲಾಗಿದೆ. ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದು, ಲವ್‌ ಜಿಹಾದ್‌ ಕರೆಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಸಹಾಯವಾಣಿ ತಂಡದಲ್ಲಿ ನುರಿತ ವಕೀಲರು, ಹಿರಿಯ ಪೊಲೀಸ್‌ ಅಧಿಕಾರಿಗಳು ಇರುತ್ತಾರೆ. ಕರೆ ಮಾಡಿದವರ ಮಾಹಿತಿ ಗೌಪ್ಯವಾಗಿಡಲಾಗುವುದು ಎಂದು ಮಂಗಳೂರಿನಲ್ಲಿ ಸಹಾಯವಾಣಿ ಉದ್ಘಾಟಿಸಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್‌ ಶೆಟ್ಟಿ ಅಡ್ಯಾರ್‌ ಮಾಹಿತಿ ನೀಡಿದರು.

ಕಾಪು ಶರತ್ ಶೆಟ್ಟಿ ಕೊಲೆ ಪ್ರಕರಣ : ಆರೋಪಿ ಯೋಗೀಶ್‌ ಪೊಲೀಸ್‌ ಕಸ್ಟಡಿಗೆ – vishwanews24

Leave a Reply