ಮಂಗಳೂರು: ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ, ವಿಶ್ವಹಿಂದೂ ಪರಿಷತ್ – Vishwanews24
ಮಂಗಳೂರು: ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ, ವಿಶ್ವಹಿಂದೂ ಪರಿಷತ್
ಮಂಗಳೂರು : ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹಿಂದೂ ಸಂಘಟನೆಗಳು ಇದೀಗ ಲವ್ ಜಿಹಾದ್ ತಡೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಿಂದೂಪರ ಸಂಘಟನೆಗಳು ಹೆಲ್ಪ್ಲೈನ್ ಆರಂಭಿಸಿದೆ.
ಕರಾವಳಿಯಲ್ಲಿ ಹೆಚ್ವುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಹಿಂದೂ ಸಂಘಟನೆಗಳು ಸಹಾಯವಾಣಿಯನ್ನು ಆರಂಭಿಸಿವೆ.

ಮನೆಯಲ್ಲಿ, ನೆರೆಹೊರೆಗಳಲ್ಲಿ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ತಕ್ಷಣ ಸಂಪರ್ಕಿಸಿ ಎಂದು ಎರಡು ವಾಟ್ಸ್ ಆಯಪ್ ಸಂಖ್ಯೆಗಳನ್ನು ನೀಡಲಾಗಿದೆ.
ಶಾಲೆ, ಕಾಲೇಜು ಕ್ಯಾಂಪಸ್, ಕೆಲಸ ಮಾಡುವ ಸ್ಥಳಗಳಲ್ಲಿ ಯುವತಿಯರು ಲವ್ ಜಿಹಾದ್ಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ಗೆ ಸಂಪರ್ಕಿಸಿ. ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಬಹುದು. ಅಗತ್ಯವಿದ್ದಲ್ಲಿ ಕಾನೂನಿನ ಸಲಹೆಗಳನ್ನು ನೀಡಲಾಗುತ್ತದೆ. ಲವ್ ಜಿಹಾದ್ ಮುಕ್ತವನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ “ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ” ಎನ್ನುವ ಟ್ಯಾಗ್ ಲೈನ್ನ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಬಗ್ಗೆ ವಿಎಚ್ ಪಿ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ನಮ್ಮ ಹಿಂದೂ ಸಹೋದರರು ತಮ್ಮ ಮನೆಗಳಲ್ಲಿ, ನೆರೆಹೊರೆಗಳಲ್ಲಿ ಅಥವಾ ಹಳ್ಳಿಗಳಲ್ಲಿ ಯಾವುದೇ ‘ಲವ್ ಜಿಹಾದ್’ ಪ್ರಕರಣಗಳನ್ನು ಕಂಡಲ್ಲಿ ಸಹಾಯವಾಣಿ ಸಂಖ್ಯೆ 9148658108 ಅಥವಾ 9591658108 ವಾಟ್ಸಾಪ್ ಅನ್ನು ಸಂಪರ್ಕಿಸಲು ನಾವು ಒತ್ತಾಯಿಸುತ್ತೇವೆ. ಶಾಲೆಗಳು, ಕಾಲೇಜು ಕ್ಯಾಂಪಸ್ಗಳು ಮತ್ತು ಕೆಲಸದ ಸ್ಥಳಗಳಲ್ಲಿ ಹಿಂದೂ ಹುಡುಗಿಯರು ಹೆಚ್ಚಿನ ಸಾಧ್ಯತೆಗಳಿವೆ. ಅವರು ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಉಡುಪಿ : ಜ. 4 ರಂದು ಕೋವ್ಯಾಕ್ಸಿನ್ ಮುನ್ನೆಚ್ಚರಿಕೆ ಡೋಸ್ ಲಸಿಕಾ ಮೇಳ – Vishwanews24
ಯುವತಿಯರು ಲವ್ ಜಿಹಾದ್ಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ಲವ್ ಜಿಹಾದ್ ಪ್ರಕರಣ ಕಂಡುಬಂದಲ್ಲಿ ಹೆಲ್ಪ್ ಲೈನ್ ನಂಬರ್ಗೆ ಸಂಪರ್ಕಿಸಿ. ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚ ಪಡದೆ ಸಂಪರ್ಕಿಸಬಹುದು ಹಿಂದೂಪರ ಸಂಘಟನೆಗಳು ಹೇಳಿವೆ.
