ಮಂಗಳೂರು : ವಾಹನ ಚಲಾಯಿಸುತ್ತಿದ್ದ ಸಂದರ್ಭ ಹೃದಯಾಘಾತ : ಟ್ಯಾಕ್ಸಿ ಚಾಲಕ ಸಾವು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ವಾಹನ ಚಲಾಯಿಸುತ್ತಿದ್ದ ಸಂದರ್ಭ ಹೃದಯಾಘಾತ : ಟ್ಯಾಕ್ಸಿ ಚಾಲಕ ಸಾವು – Vishwanews24

ಮಂಗಳೂರು : ವಾಹನ ಚಲಾಯಿಸುತ್ತಿದ್ದ ಸಂದರ್ಭ ಹೃದಯಾಘಾತಕ್ಕೆ ಒಳಗಾಗೀ ಟ್ಯಾಕ್ಸಿ ಚಾಲಕ ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಸಂದರ್ಭ ನಡೆದ ಅಪಘಾತದಲ್ಲಿ ಅದೃಷ್ಟವಶಾತ್​ ಹೆಚ್ಚಿನ ಅವಘಡ ಸಂಭವಿಸಿಲ್ಲ.

ಮಂಗಳೂರಿನ ಪಾಂಡೇಶ್ವರ ನಿವಾಸಿ ಮೊಹಮ್ಮದ್ ಶರೀಫ್ (57) ಮೃತಪಟ್ಟವರು. ಮಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ನಗರದ ಮಂಗಳಾದೇವಿಯಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದಾಗಲೇ ಮೊಹಮ್ಮದ್ ಶರೀಫ್ ಅವರಿಗೆ ಹೃದಯಾಘಾತವಾಗಿದೆ.

ಈ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಲು ಸಾಧ್ಯವಾಗದೆ ಇವರ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ. ಸ್ವಲ್ಪದರಲ್ಲಿ ಬಸ್ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿದೆ. ಕಾರಿನಲ್ಲಿ ಮೂರ್ಛೆ ತಪ್ಪಿದ್ದ ಮೊಹಮ್ಮದ್ ಶರೀಫ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :

ಭಾರತದಲ್ಲಿ ಒಂದು ರಾಜ್ಯದ ಜನರನ್ನು ಆಳಲು ಸಾಧ್ಯವಿಲ್ಲ : ರಾಹುಲ್ ಗಾಂಧಿ – Vishwanews24

Leave a Reply