Featured

ಮಂಗಳೂರು: ವಿದೇಶಿ ಉದ್ಯೋಗದ ಆಮಿಷಕ್ಕೆ ವಂಚಕರ ಬಲೆಗೆ ಬೀಳದಂತೆ ಯುವಜನತೆಗೆ ಪೊಲೀಸ್‌ ಆಯುಕ್ತರ ಎಚ್ಚರಿಕೆ – vishwanews24

ಮಂಗಳೂರು: ವಿದೇಶಿ ಉದ್ಯೋಗದ ಆಕಾಂಕ್ಷಿಗಳು ಯಾವುದೇ ಏಜೆನ್ಸಿಯನ್ನು ನಂಬುವ ಮುನ್ನಎಚ್ಚರ : ಸುಧೀರ್ ಕುಮಾರ್ ರೆಡ್ಡಿ ಮನವಿ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕನಸು ಕಾಣುವ ಯುವ ಜನತೆ ವಂಚಕರ ಜಾಲಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್‌ ಕಮೀಷನರ್‌ ಸುಧೀರ್ ಕುಮಾರ್ ರೆಡ್ಡಿ ಅವರು ಪಾಲಿಸಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ವಿದೇಶಿ ಉದ್ಯೋಗದ ಆಕಾಂಕ್ಷಿಗಳು ಯಾವುದೇ ಏಜೆನ್ಸಿಯನ್ನು ನಂಬುವ ಮುನ್ನ, ಆ ನೇಮಕಾತಿ ಏಜೆನ್ಸಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಲ್ಪಟ್ಟಿದೆಯೇ ಮತ್ತು ಅಧಿಕೃತ ‘ಇ-ಮೈಗ್ರೇಟ್’ ಪೋರ್ಟಲ್‌ನಲ್ಲಿ ಪಟ್ಟಿಯಲ್ಲಿದೆಯೇ ಎಂಬುದನ್ನು ಖಂಡಿತವಾಗಿ ಪರಿಶೀಲಿಸಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಸರಿಯಾದ ಪರಿಶೀಲನೆ ನಡೆಸದೆ ಮುಂಚಿತವಾಗಿ ಹಣವನ್ನು ಪಾವತಿಸುವುದು ಅಥವಾ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ನಕಲಿ ಉದ್ಯೋಗದ ಆಫರ್‌ಗಳು ನಿಮ್ಮನ್ನು ಕೇವಲ ಆರ್ಥಿಕ ನಷ್ಟಕ್ಕಷ್ಟೇ ಅಲ್ಲದೆ, ಭಾರಿ ಶೋಷಣೆ ಹಾಗೂ ಮನುಷ್ಯ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಿಗೂ ಸಿಲುಕಿಸಬಹುದು. ಹಾಗಾಗಿ, ಸದಾ ಜಾಗರೂಕರಾಗಿರಿ, ಮೊದಲು ಪರಿಶೀಲಿಸಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಿ ಎಂದು ಮಂಗಳೂರು ಕಮಿಷನರ್ ಕೋರಿದ್ದಾರೆ.

Vishwa News 24

Recent Posts

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

10 minutes ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

22 minutes ago

ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್ : ED ದಾಳಿ ಬೆನ್ನಲ್ಲೇ IT ಇಲಾಖೆ ಅಧಿಕಾರಿಗಳಿಂದ ದಾಳಿ – vishwanews24

ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್ : ED ದಾಳಿ ಬೆನ್ನಲ್ಲೇ, IT ಇಲಾಖೆ ಅಧಿಕಾರಿಗಳಿಂದ ದಾಳಿ ಬೆಂಗಳೂರು: ಅಟ್ಟಿಕಾ…

54 minutes ago

ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಕೈತಪ್ಪುವ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ – vishwanews24

ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ …

2 hours ago

ಕುಂದಾಪುರ : ಹುಟ್ಟೂರಿಗೆ ತಲುಪಿದ ಅನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ – vishwanews24

ಕುಂದಾಪುರ: ಶಾರ್ಜಾದಲ್ಲಿ ನಿಗೂಢ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಹುಟ್ಟೂರಿಗೆ ಕುಂದಾಪುರ : ಶಾರ್ಜಾದಲ್ಲಿ ಜುಲೈನಲ್ಲಿ ನಿಗೂಢವಾಗಿ…

2 hours ago

ಏಷ್ಯನ್ ಗೇಮ್ಸ್ ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡ ಭಾರತ – vishwanews24

ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ 2ನೇ ಚಿನ್ನ.. 10 ಮೀಟರ್ ಏರ್ ಪಿಸ್ತೂಲ್‌ ನಲ್ಲಿ ಸ್ವರ್ಣ ಪದಕ ಗೆದ್ದ ಕಮಲ್‌ಜೀತ್–ಸುರುಚಿ…

2 hours ago