Featured

ಮಂಗಳೂರು :ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ 32.97 ಎಕರೆ ಹೆಚ್ಚುವರಿ ಭೂಮಿ ಪ್ರಸ್ತಾವನೆಗೆ ಎಎಐ ಅನುಮೋದನೆ – vishwanews24

ಮಂಗಳೂರು :ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ 32.97 ಎಕರೆ ಹೆಚ್ಚುವರಿ ಭೂಮಿ ಪ್ರಸ್ತಾವನೆಗೆ ಎಎಐ ಅನುಮೋದನೆ

ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 32.97 ಎಕರೆ ಹೆಚ್ಚುವರಿ ಭೂಮಿಯ ಅವಶ್ಯಕತೆಯಿದ್ದು, ಈ ಬಗ್ಗೆ ಸಲ್ಲಿಸಲಾದ ಪ್ರಸ್ತಾವನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಅನುಮೋದನೆ ನೀಡಿದೆ.

ರಾಜ್ಯ ಸರಕಾರವು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂಮಿ ನೀಡುವವವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ರಾಜ್ಯ ಸರಕಾರ ನಿಲುವಿಗೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಕಾರ್ಯನಿರ್ವಾಹಕ ನಿರ್ದೇಶಕ (ಜೆವಿಸಿ -ಪಿಪಿಪಿ -2) ಅನಾಮಿ ಪಾಂಡೆ ಅವರು ರಾಜ್ಯ ಸರಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2025, ಸೆ.9ರಂದು ಬರೆದಿರುವ ಪತ್ರದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗಾಗಿ 32.97 ಎಕರೆ ಜಮೀನನ್ನು ರಾಜ್ಯ ಸರಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಜಮೀನಿನ ಮೌಲ್ಯ ಅಗತ್ಯದ ಎಲ್ಲ ವೆಚ್ಚಗಳನ್ನು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಎಂಜಿಐಎಎಲ್) ಸಂಸ್ಥೆಯು ಭರಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

*ನಿಲುವಿನಿಂದ ಹಿಂದೆ ಸರಿಯದ ರಾಜ್ಯ ಸರಕಾರ: ಹಿಂದೆ ಕೇಂದ್ರ ಸರಕಾರ ಭೂಮಿ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಭೂಮಿ ಬಿಟ್ಟುಕೊಡಲು ಸ್ಥಳೀಯ ಭೂಮಾಲೀಕರಿಗೆ ಪರಿಹಾರ ನೀಡಬೇಕೆಂಬ ರಾಜ್ಯ ಸರಕಾರವು ಕೇಂದ್ರಕ್ಕೆ ತಿಳಿಸಿತ್ತು. ರಾಜ್ಯ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯದೆ ಭೂಮಿ ಕಳೆದು ಕೊಳ್ಳುವವರಿಗೆ ಪರಿಹಾರ ಒದಗಿಸಿಕೊಡುವ ಪ್ರಯತ್ನದಲ್ಲಿಯಶಸ್ವಿಯಾಗಿದೆ. ಜನಪರ ಕಾಳಜಿಯ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಎಂದಿಗೂ ಜನತೆಯ ಪರವಾಗಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಕಾಂಗ್ರೆಸ್ ಧುರೀಣರಾದ ಪದ್ಮರಾಜ ಆರ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

Vishwa News 24

Recent Posts

ರೈಲ್ವೆ ಕಾಮಗಾರಿ ಹಿನ್ನಲೆ : ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ – vishwanews24

ರೈಲು ಪ್ರಯಾಣಿಕರ ಗಮನಕ್ಕೆ: ರೈಲ್ವೆ ಕಾಮಗಾರಿ ಹಿನ್ನಲೆ - ಪ್ರಮುಖ ರೈಲುಗಳ ಸಮಯ ಬದಲಾವಣೆ ಬೆಂಗಳೂರು:ರೈಲ್ವೆ ಕಾಮಗಾರಿ ಹಿನ್ನೆಲೆ ನೈರುತ್ಯ…

52 minutes ago

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ – vishwanews24

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ ಮಂಗಳೂರು : ಶತಮಾನಕ್ಕೂ ಅಧಿಕ…

1 hour ago

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ – vishwanews24

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ ಶ್ರೀನಗರ: ಕುಲ್ಗಾಮ್‌ನ ಸಿಆರ್‌ಪಿಎಫ್‌ ಚೆಕ್‌ ಪೋಸ್ಟ್‌ ಮೇಲೆ ದಾಳಿ…

24 hours ago

ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  – vishwanews24

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  ಬೆಂಗಳೂರು: ಮಾಸಿಕ…

1 day ago

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ 5ನೇ…

1 day ago

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು – vishwanews24

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು ಬ್ರಹ್ಮಾವರ,:ಒಣ ಹುಲ್ಲು…

1 day ago