ಮಂಗಳೂರು: ವಿರೋಧ ಹಿನ್ನಲೆ; ಸಂಜಕಾ ಡಿಜೆ ಪಾರ್ಟಿ ರದ್ದು – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ವಿಹೆಚ್‌ಪಿ, ಬಜರಂಗದಳ ವಿರೋಧ ಹಿನ್ನಲೆ; ಸಂಜಕಾ ಡಿಜೆ ಪಾರ್ಟಿ ರದ್ದು

ಮಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಬೋಳಾರದಲ್ಲಿ ಶುಕ್ರವಾರ ರಾತ್ರಿ ಇಸ್ರೇಲ್‌ನ ಕಲಾವಿದ ಸಜಂಕಾ ಅವರಿಂದ ನಡೆಯಬೇಕಾಗಿದ್ದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ ಬೇರೆ ಕಲಾವಿದರ ಮೂಲಕ ಕಾರ್ಯಕ್ರಮ ನಡೆಸಲಾಯಿತು.

ಡಿಜೆ ಪಾರ್ಟಿಗಳಲ್ಲಿ ಡ್ರಗ್ಸ್‌ ಮಾಫಿಯಾದಿಂದಾಗಿ ಯುವಕ ಯುವತಿಯರ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಅಪಾಯವಿದೆ. ಅಲ್ಲದೆ ಸಜಂಕಾ ಹಿಂದೂ ದೇವರ ಬಗ್ಗೆ ವಿಡಂಬನೆ ಮಾಡಿದ್ದಾರೆ. ಹಾಗಾಗಿ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗದಳ ಪೊಲೀಸ್‌ ಇಲಾಖೆಗೆ ಮನವಿ ಮಾಡಿತ್ತು.

ಉಡುಪಿ : ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಭೇಟಿ ನೀಡಿ ವೈಯಕ್ತಿಕ 1 ಲಕ್ಷ ರೂ. ಸಹಾಯ ನೀಡಿದ ಯಶ್ಪಾಲ್ ಸುವರ್ಣ – vishwanews24

ಸಜಂಕಾ ಕಾರ್ಯಕ್ರಮ ನಡೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಜಂಕಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಸಜಂಕಾ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದರೂ ಕಾರ್ಯಕ್ರಮ ನೀಡದೆ ಹೊಟೇಲ್‌ನಲ್ಲೇ ವಾಸ್ತವ್ಯವಿದ್ದರು.

Leave a Reply