ಮಂಗಳೂರು: ವೃದ್ದ ಮಾವನ ಮೇಲೆ ಮಾರಣಾಂತಿಕ ಹಲ್ಲೆ ,ಮನಸೋ ಇಚ್ಚೆ ಥಳಿಸಿದ ಸೊಸೆ – Vishwanews24

Featured, ದಕ್ಷಿಣ ಕನ್ನಡ

ಸೊಸೆಯಿಂದ ವೃದ್ದ ಮಾವನ ಮೇಲೆ ಮಾರಣಾಂತಿಕ ಹಲ್ಲೆ 

ಮಂಗಳೂರು: ಸೊಸೆಯೊಬ್ಬಳು ವೃದ್ದ ಮಾವನಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ನಗರದ ಕುಲಶೇಖರ ಬಳಿ ನಡೆದಿದ್ದು ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.

ಹಲ್ಲೆಯಿಂದ 87 ವರ್ಷದ ವಯೋವೃದ್ಧರಾಗಿರುವ ಪದ್ಮನಾಭ ಸುವರ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು ಕುಲಶೇಖರದ ನಿವಾಸಿ, ಕೆಇಬಿ ಅಧಿಕಾರಿ ಶ್ರೀಮತಿ ಉಮಾಶಂಕರಿ ಎಂದು ಗುರುತಿಸಲಾಗಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾನು ಈ ಬಾರಿ ಚುನಾವಣೆ ಸ್ಪರ್ಧೆ ಮಾಡೇ ಮಾಡ್ತೀನಿ : ಶೋಭಾ ಕರಂದ್ಲಾಜೆ – Vishwanews24

ಮಾ. ೯ ರಂದು ಈ ಘಟನೆ ನಡೆದಿದ್ದು, ಉಮಾ ಶಂಕರಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ವೃದ್ದ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಹಲ್ಲೆ ನಡೆಸು ನಿಂದಿಸಿದ್ದು, ಪದ್ಮನಾಭ ಸುವರ್ಣ ಅವರ ಪುತ್ರಿ ಪ್ರಿಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಸಂವಿಧಾನ  ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ; ಇದು ಬಿಜೆಪಿಯವರ ಹಿಡನ್ ಅಜೆಂಡಾ : ಸಿದ್ದರಾಮಯ್ಯ ವಾಗ್ದಾಳಿ – Vishwanews24

Leave a Reply