ಮಂಗಳೂರು – ಶಬರಿಮಲೆ ನಡುವೆ ವಿಶೇಷ ರೈಲುಗಳ ಸಂಚಾರ – vishwanews24

Featured, ದಕ್ಷಿಣ ಕನ್ನಡ, ರಾಷ್ಟ್ರ ನ್ಯೂಸ್

ಮಂಗಳೂರು – ಶಬರಿಮಲೆ ನಡುವೆ ವಿಶೇಷ ರೈಲುಗಳ ಸಂಚಾರ

ಮಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆ ಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತಿರುವನಂತಪುರ ನಾರ್ತ್ ನಿಲ್ದಾಣ ಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.

ಮಂಗಳೂರು ಜಂಕ್ಷನ್-ತಿರುವ ನಂತಪುರ ನಾರ್ತ್ ವೀಕ್ಲಿ ಎಕ್ಸ್ ಪ್ರಸ್ ಸ್ಪೆಷಲ್ (ನಂ. 06041) ರೈಲು ಡಿ.7ರಿಂದ ಜ.18ರ ವರಗೆ ಪ್ರತಿ ರವಿವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್ ತಲುಪಲಿದೆ. ಅದೇ ರೀತಿತಿರುವನಂತಪುರ ನಾರ್ತ್-ಮಂಗ ಳೂರು ಜಂಕ್ಷನ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ (ನಂ.06042) ರೈಲು ಡಿ.8ರಿಂದ ಜ.19ರ ವರಗೆ ಪ್ರತಿ ಸೋಮ ವಾರ ಬೆಳಗ್ಗೆ 8.30ಕ್ಕೆ ತಿರುವನಂತಪುರ ನಾರ್ತ್ ನಿಂದ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಸೆಂಟ್ರಲ್ ತಲುಪಲಿದೆ.

ಪುತ್ತೂರು : ಮಾದಕವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪಿಯ ಬಂಧನ ;10 ಗ್ರಾಂ ಎಂಡಿಎಂಎ ವಶಕ್ಕೆ – vishwanews24

ಶಬರಿಮಲೆ: 15 ಲಕ್ಷ ದಾಟಿದ ಯಾತ್ರಾರ್ಥಿಗಳ ಸಂಖ್ಯೆ
ಮಂಡಲ- ಮಕರಮಾಸ ಋತುವಿನ 18 ದಿನಗಳು ಪೂರ್ಣಗೊಂಡಿದ್ದು, ಶಬರಿಮಲೆ ತಲುಪಿದ ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 15 ಲಕ್ಷ ದಾಟಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಡಿ. 3ರಂದು ಸಂಜೆ 7 ಗಂಟೆಯವರೆಗೆ 14,95,774 ಜನರು ದೇವಾಲಯ ತಲುಪಿ ದ್ದಾರೆ. ಸಂಜೆ 7 ಗಂಟೆಯ ಅನಂತರದ ಸಂಖ್ಯೆಯನ್ನು ಸೇರಿಸಿದರೆ,ಅದು 15 ಲಕ್ಷ ಮೀರುತ್ತದೆ. ಬುಧವಾರ ಬೆಳಗ್ಗೆ 12 ರಿಂದ ಸಂಜೆ 7 ಗಂಟೆಯವರೆಗೆ 66,522 ಜನರು ದೇವಾಲಯ ತಲುಪಿದರು.

ಇಂದು ಸನ್ನಿಧಾನದಲ್ಲಿ ಬೆಳಗಲಿದೆ ಕಾರ್ತಿಕ ದೀಪ
ವೃಶ್ಚಿಕ ಮಾಸದ ಕಾರ್ತಿಕ ದಿನವಾದ ಡಿ. 4ರಂದು ಶಬರಿಮಲೆ ಸನ್ನಿಧಾನದಲ್ಲಿ ಕಾರ್ತಿಕ ದೀಪ ಬೆಳಗಲಿದೆ. ಸಂಜೆ ದೀಪಾರಾಧನೆಗೂ ಮುನ್ನ ತಂತ್ರಿ ಕಾಂತಾರ ಮಹೇಶ್ ಮೋಹನ ಕಾರ್ತಿಕ ದೀಪ ಬೆಳಗಿಸುವರು.

ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ಸಭೆ ನಡೆಸಲು ನನಗೆ ಅವಕಾಶ ನೀಡಿಲ್ಲ : ರಾಹುಲ್‌ ಗಾಂಧಿ ಅಸಮಾಧಾನ – vishwanews24

ಸನ್ನಿಧಾನದ ಎಲ್ಲ ವಿಗ್ರಹಗಳ ಮುಂದೆ ದೀಪಗಳನ್ನು ಬೆಳಗಿಸಲಾಗುತ್ತದೆ ಮತ್ತು ಮಾಲಿಕಪ್ಪುರಂನಲ್ಲಿ ವಿಶೇಷ ದೀಪಾರಾಧನೆ ಮಾಡಲಾಗುತ್ತದೆ. ವಲಿಯನಾಡಪಂತಲ್, ಪಂಡಿತಾವಲಂ, ದೇವಸ್ವಂ, ಸರಕಾರಿ ಕಟ್ಟಡಗಳು, ವ್ಯಾಪಾರ ಸ್ಥಳಗಳು, ಪಂಪಾ ಮತ್ತು ನಿಲಕ್ಕಲ್‌ನಲ್ಲಿಯೂ ಈ ಸಂದರ್ಭ ದೀಪಗಳನ್ನು ಬೆಳಗಿಸಲಾಗುತ್ತದೆ.
Pr

Leave a Reply