ಮಂಗಳೂರು : ಸತ್ಯಜಿತ್ ಸುರತ್ಕಲ್ ಗನ್ ಮ್ಯಾನ್ ಭದ್ರತೆ ಮುಂದುವರಿಸಲು ಒತ್ತಾಯ : ಮನವಿ ಸ್ವೀಕರಿಸಲು ನಿರಾಕರಿಸಿದ ಪೊಲೀಸ್ ಕಮಿಷನರ್.. – Vishwanews24
ಮಂಗಳೂರು : ಸತ್ಯಜಿತ್ ಸುರತ್ಕಲ್ ಗನ್ ಮ್ಯಾನ್ ಭದ್ರತೆ ಮುಂದುವರಿಸಲು ಒತ್ತಾಯ : ಮನವಿ ಸ್ವೀಕರಿಸಲು ನಿರಾಕರಿಸಿದ ಪೊಲೀಸ್ ಕಮಿಷನರ್..
ಮಂಗಳೂರು : ಹಿಂದೂ ನಾಯಕ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ಗನ್ ಮ್ಯಾನ್ ಭದ್ರತೆಯನ್ನು ಮುಂದುವರೆಸಬೇಕೆಂದು ಮನವಿ ನೀಡಲು ಮುಂದಾದ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ನೇತ್ರತ್ವದ ನಿಯೋಗ ಮನವಿ ಸ್ವೀಕರಿಸಲು ಮಂಗಳೂರು ಪೊಲೀಸ್ ಕಮಿಷನರ್ ನಿರಾಕರಿಸಿದ್ದಾರೆ.
ಸರಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸಿ ಗನ್ ಮ್ಯಾನ್ ಭದ್ರತೆಯನ್ನು ಮುಂದುವರಿಸ ಬೇಕೆಂದು ಮಂಗಳೂರಿನ ರಾಷ್ಟ್ರ ಭಕ್ತ ವೇದಿಕೆ ಮತ್ತು ದಕ್ಷಿಣ ಕನ್ನಡ ವುಶು ಅಸೋಸಿಯೇಶನ್ ಪರವಾಗಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ನೇತ್ರತ್ವದ ನಿಯೋದ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿತ್ತು.
ಕನಿಷ್ಟ 5 ಜನರ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ಕೊಡಿ ಎಂದು ಬೇಡಿಕೊಂಡರೂ ಪೊಲೀಸ್ ಆಯುಕ್ತರು ಸಮ್ಮತಿಸಿಲ್ಲ ಎಂದು ಪ್ರಸನ್ನ ರವಿ ಆರೋಪಿಸಿದ್ದಾರೆ.
ಹಳೆಯಂಗಡಿ : ಬೈಕಿಗೆ ಕಾರು ಡಿಕ್ಕಿ – ಸವಾರ ಗಂಭೀರ ಗಾಯ – Vishwanews24
ಮಾದ್ಯಮಗಳ ಬಳಿ ಮಾತನಾಡಿ ಅವರು ಪೊಲೀಸ್ ಆಯುಕ್ತರು ಒಬ್ಭರೇ ಬಂದು ಮನವಿ ಕೊಡುವುದಾದರೆ ಮಾತ್ರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಫೋಟೊ ತೆಗೆಯಲು ಅವಕಾಶ ನಿರಾಕರಿಸಿದ್ದಾರೆ ಎಂದು ಪ್ರಸನ್ನ ರವಿ ಆರೋಪಿಸಿದರು.
ಪೊಲೀಸ್ ಆಯುಕ್ತರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಸನ್ನ ರವಿ ಆಡಳಿತ ನಡೆಸುವ ಸರಕಾರದ ಜತೆ ಪೊಲೀಸರೂ ಶಾಮೀಲಾಗಿದ್ದಾರೆಯೇ ಎಂಬ ಸಂಶಯ ಬರುತ್ತಿದೆ. ಹಣ ಕೊಟ್ಟು ಭದ್ರತೆ ಪಡೆಯಬೇಕೆಂದು ಆಯುಕ್ತರು ಹೇಳುತ್ತಾರೆ.
ಅಂದರೆ ಹಣ ಕೊಟ್ಟರೆ ಟೆರರಿಸ್ಟ್ ಗಳಿಗೂ ಗನ್ ಮ್ಯಾನ್ ಭದ್ರತೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.ಸರಕಾರ ಮತ್ತು ಪೊಲೀಸ್ ಇಲಾಖೆಯ ಈ ಕ್ರಮದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಉಡುಪಿ: ಇಡೀ ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ ನಿರ್ಮಾಣ : ಕೋಟ ಶ್ರೀನಿವಾಸ್ ಪೂಜಾರಿ – Vishwanews24
