ಮಂಗಳೂರು ಸುದರ್ಶನ್ ಕೊಲೆ ಪ್ರಕರಣ: ಪ್ರಿಯತಮೆಗೆ ಕಿರುಕುಳ : ಕೊಲೆ ಮಾಡಿ ಮೃತದೇಹ ಎಸೆದು ಪೊಲೀಸರಿಗೆ ಕರೆ ಮಾಡಿದ್ದ ಆರೋಪಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಕಾಸರಗೋಡು ಮೂಲದ ಸುದರ್ಶನ್ (20) ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.

ರೌಡಿ ರಕ್ಷಿತ್  ಸುದರ್ಶನ್ ಮೃತದೇಹವನ್ನು ಎಸೆದು ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ .ಎನ್ನಲಾಗಿದೆ. ತಾನು ರಕ್ಷಿತ್ ಎಂಬುದಾಗಿ ತಿಳಿಸಿ, ತನ್ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಎಚ್ಚರಿಸಿದ್ದ ಚಾಳಿ ಮುಂದುವರಿಸಿದ್ದನು. ಧಿಕ್ಕು ತೋಚದೆ ಹತ್ಯೆ ನಡೆಸಿ ಕಾಪಿಕಾಡು ಸಮೀಪ ಎಸೆದಿರುವೆ. ಇಂದು ತಮ್ಮ ಕೈಗೆ ಸಿಗುವುದಿಲ್ಲ ಎನ್ ಕೌಂಟರ್ ಮಾಡುವಿರಾ ಅನ್ನುವ ಸಂಶಯವಿದೆ. ನಾಳೆ (ಇಂದು) ತಾನೇ ಬಂದು ಸರೆಂಡರ್ ಆಗುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಸುದರ್ಶನ್ ರೌಡಿ ರಕ್ಷಿತ್ ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದು, ಆತ ಎಚ್ಚರಿಕೆ ನೀಡಿದ ಬಳಿಕವೂ ತನ್ನ ಚಾಳಿ ಮುಂದುವರಿಸಿದ್ದ ಕಾರಣಕ್ಕೆ ಹತ್ಯೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.