Featured

ಮಂಗಳೂರು:  ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಒತ್ತಾಯದ ಬಗ್ಗೆ ಸರಕಾರ ತೀರ್ಮಾನಿಸಲಿದೆ  : ದಿನೇಶ್ ಗುಂಡೂರಾವ್ – vishwanews24

ಮಂಗಳೂರು:  ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಒತ್ತಾಯದ ಬಗ್ಗೆ ಸರಕಾರ ತೀರ್ಮಾನಿಸಲಿದೆ  : ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಾಗೂ ಪಾಕ್ ಮತ್ತು ಭಾರತ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಸೈನಿಕರ ವಿರುದ್ಧ ಸಂದೇಶಗಳು, ಸುಳ್ಳು ಸುದ್ದಿ, ಉದ್ರೇಕಕಾರಿ ಹೇಳಿಕೆ, ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಕೆಲವರು ನಕಲಿ ಖಾತೆಗಳ ಮೂಲಕ ಈ ಕೃತ್ಯದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯ ವೇಳೆ ಈ ಸಂಬಂಧ ಪ್ರಶ್ನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸೈನಿಕರ ವಿರುದ್ಧ ಸಂದೇಶ ನೀಡುತ್ತಿರುವವರ ಕುರಿತ ಪ್ರಶ್ನೆಗೆ, ಸೈನಿಕರ ವಿರುದ್ಧದ ಯಾವುದೇ ಅಪಪ್ರಚಾರ, ಹೇಳಿಕೆಯನ್ನು ಸಹಿಸಲಾಗದು. ದೇಶದ ವಿಚಾರ ಬಂದಾಗ ನಾವೆಲ್ಲಾ ಒಂದೇ. ಈಗಾಗಲೇ ತಿರಂಗಾ ಯಾತ್ರೆ ನಡೆಸಲಾಗಿದ್ದು, ಕೇಂದ್ರ ಸರಕಾರದ ಜತೆ ನಾವಿರುವುದನ್ನು ಸ್ಪಷ್ಟಪಡಿಸಲಾಗಿದೆ. ದೇಶದ ಏಕತೆ, ಭದ್ರತೆಗೆ ಚ್ಯುತಿ ತರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಲಾಗದು. ನಕಲಿ ಖಾತೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಈಗಾಗಲೇ ಗೃಹ ಸಚಿವರು ಸೈಬರ್ ಸೆಲ್ ಬಲಪಡಿಸುವುದು ಸಿಬ್ಬಂದಿ ಹೆಚ್ಚಳಕ್ಕೆ ಸಂಬಂಧಿಸಿ ನಿರ್ದೇಶನ ನೀಡಿದ್ದಾರೆ ಎಂದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಪ್ರತಿನಿಧಿಗಳ ಯಾರೂ ಅವರ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ, ಸಚಿವ ದಿನೇಶ್ ಗುಂಡೂರಾವ್ ಅನೇಕ ಕೊಲೆ, ಹತ್ಯೆ ನಡೆಯುತ್ತದೆ. ಯಾವ ಕಾರಣಕ್ಕೆ ಆಗಿದೆ ತಿಳಿದು ಅದರ ಅನುಸಾರ ಸರಕಾರ ತನ್ನ ಜವಾಬ್ಧಾರಿ ನಿರ್ವಹಿಸುತ್ತದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಸರಕಾರದ ಆದ್ಯತೆ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಒತ್ತಾಯದ ಬಗ್ಗೆ ಸರಕಾರ ತೀರ್ಮಾನಿಸಲಿದೆ. ಅದು ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರ. ಆತನ ಕೊಲೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ಪೊಲೀಸ್ ಇಲಾಖೆ ಜವಾಬ್ಧಾರಿಯುತವಾಗಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮಗಳಲ್ಲಿಯೂ ಪಾರದರ್ಶಕ ತನಿಖೆ ಮುಂದುವರಿದಿದೆ. ಹಾಗೆಂದು ಬಿಜೆಪಿಯವರ ಊಹಾಪೋಹ, ಕಪೋಲ ಕಲ್ಪಿತ ಹೇಳಿಕೆಗಳಿಗೆ ನಾನು ಉತ್ತರ ಕೊಡಲು ಆಗದು ಎಂದರು.

ಯಾವುದೇ ರೀತಿಯ ಸಾಕ್ಷ್ಯಗಳು ಇದ್ದಲ್ಲಿ ಅದನ್ನು ತನಿಖೆ ನಡೆಸುವವರಿಗೆ ಒಪ್ಪಿಸಲಿ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು.

ಗಡಿಯಲ್ಲಿನ ಪ್ರಕ್ಷ್ಯುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ವರಿಷ್ಟರು, ಜಿಲ್ಲಾಧಿಕಾರಿಗಳ ಜತೆ ಈಗಾಗಲೇ ಸಭೆ, ಚರ್ಚೆ ನಡೆದಿದೆ. ಕೇಂದ್ರ ಸರಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿಯೂ ಅಗತ್ಯ ಭದ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉಸ್ತುವಾರಿ ಸಚಿವರು ಉತ್ತರಿಸಿದರು.

 

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

11 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

20 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

20 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

20 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

20 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago