ಮಂಗಳೂರು  : ಸ್ಟೇಟ್‌ಬ್ಯಾಂಕ್‌ನಲ್ಲಿ ಬಸ್ ಢಿಕ್ಕಿಯಾಗಿ ಪಾದಚಾರಿ ಸಾವು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು  : ಸ್ಟೇಟ್‌ಬ್ಯಾಂಕ್‌ನಲ್ಲಿ ಬಸ್ ಢಿಕ್ಕಿಯಾಗಿ ಪಾದಚಾರಿ ಸಾವು

ಮಂಗಳೂರು: ಬಸ್ ಢಿಕ್ಕಿಯಾಗಿ ಪಾದಾಚಾರಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಮೀನು ಮಾರ್ಕೆಟ್ ಎದುರು ನಿನ್ನೆ ನಡೆದಿದೆ.

ಬಸವರಾಜ್ (45) ಮೃತ ದುರ್ದೈವಿ.

ಇವರು ಬೆಳಿಗ್ಗೆ 7.20ಕ್ಕೆ ಮೀನು ಮಾರ್ಕೆಟ್ ಎದುರು ರಸ್ತೆ ದಾಟುತ್ತಿದ್ದಾಗ ರಾವ್ ಆ್ಯಂಡ್ ರಾವ್ ಸರ್ಕಲ್ ಕಡೆಗೆ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆಯಿತು.

ಅಪಘಾತದಲ್ಲಿ ಬಸವರಾಜ್ ಅವರು ಸುಮಾರು 15 ಅಡಿ ದೂರಕ್ಕೆ ಎಳೆದುಕೊಂಡು ಹೋಗಿದೆ. ತೊಡೆ ಮತ್ತು ಸೊಂಟಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೊಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಉಡುಪಿ : ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ  – Vishwanews24

ಘಟನೆಗೆ ಬಸ್ ಚಾಲಕ ಅಶ್ತಫ್ ವುಲ್ಲಾ ನಿರ್ಲಕ್ಷ್ಯತನ ಮತ್ತು ಅಪಾಯಕಾರಿಯಾಗಿ ಬಸ್ ಚಾಲನೆ ಮಾಡಿರುವುದೇ ಅಪಘಾತ ಸಂಭವಿಸಲು ಕಾರಣ ಎನ್ನುವ ಆರೋಪ ವ್ಯಕ್ತವಾಗಿದೆ.

ಮಂಗಳೂರು ಪಶ್ವಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply