ಮಂಗಳೂರು : ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತ್ಯು – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು: ಇಬ್ಬರು ಮೃತ್ಯು

ಮಂಗಳೂರು: ನಗರದ ಜೈಲು‌ ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಡ್ವಿನ್ ಮೃತ ದುರ್ದೈವಿಗಳು.

ನಾಗಮಂಗಲ ಗಲಭೆ : ಕಿಡಿಗೇಡಿಗಳು ಯಾವುದೇ ಜಾತಿ, ಧರ್ಮಿಯರಾದರೂ ನಿರ್ದಾಕ್ಷಿಣ್ಯ ಕ್ರಮ : ಸಿಎಂ ಸಿದ್ದರಾಮಯ್ಯ – vishwanews24

ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದಿದ್ದರು. ಅಡ್ವಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು.

Leave a Reply