ಮಂಗಳೂರು: ಕೆಲವು ಹಿಂದು ಸಂಘಟನೆಗಳು ಬ್ಯಾನರ್ ಹಾಕಿ ಲವ್‌ಜಿಹಾದ್ ನಿಯಂತ್ರಿಸಲು ಮುಂದಾಗಿರುವುದು ಹಾಸ್ಯಾಸ್ಪದ. ಇಲ್ಲಿ ಲವ್ ಜಿಹಾದ್ ಎನ್ನುವ ವಿಚಾರವೇ ಇಲ್ಲ. ಹೇಳಿಕೆ ನೀಡುವವರು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಸಂಘಟನೆಯನ್ನು ಗುರಾಣಿಯನ್ನಾಗಿ ಹಿಡಿದುಕೊಂಡಿದ್ದಾರೆ. ಇಲ್ಲಿ ಸಮುದಾಯದ ನಡುವೆ ಕಂದರ ಸೃಷ್ಟಿಸಲು ಮುಂದಾಗಿದ್ದಾರೆ. ಪೊಲೀಸರು ಸ್ವಯಂಪ್ರೇರಿತರಾಗಿ ಅವರ ಮೇಲೆ ಕೇಸು ದಾಖಲಿಸಬೇಕು ಎಂದು ಮುಸ್ಲಿಂ ಜಸ್ಟಿಸ್ ಫೋರಂ ನ ಸ್ಥಾಪಕ ರಫಿಯುದ್ದೀನ್ ಕುದ್ರೋಳಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ನಮ್ಮ ಸಮುದಾಯದ ಯುವಕರು ಯಾವುದೇ ರೀತಿಯ ಅನೈತಿಕ ಚಟುವಟಿಕೆ, ಕ್ರಿಮಿನಲ್ ಕೃತ್ಯಗಳಲ್ಲಿ ಭಾಗವಹಿಸಬಾರದು ಎಂದು ಪ್ರತೀ ಮಸೀದಿಗಳಲ್ಲೂ ನಾವು ಉಪದೇಶ ನೀಡುತ್ತಾ ಇರುತ್ತೇವೆ. ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆ, ನ್ಯಾಯಾಂಗ ವಿಧಾನ ಇದೆ. ಆದರೆ ಇಂದು ತಪ್ಪಿತಸ್ಥರು ಅಲ್ಲದೇ ಇದ್ದರೂ ಅವರನ್ನು ಸಂತ್ರಸ್ತರನ್ನಾಗಿಸುವ ಕೆಲಸ ನಡೆದಿದೆ.
ಕೊಣಾಜೆ ಜಾನುವಾರು ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಬಂದಿದ್ದು, ಅದಕ್ಕೆ ಮತ್ತೆ ಸರಕಾರ ತಿದ್ದುಪಡಿ ಮಾಡಿದೆ.
ಕರ್ನಾಟಕದಲ್ಲಿ ಗೋಮಾಂಸ ತಿನ್ನುವುದನ್ನು ನಿಷೇಧಿಸಿಲ್ಲ. ಅದಕ್ಕೆ ಅದರದ್ದೇ ಆದ ಗೈಡ್ಲೈನ್ಸ್ ಇದೆ. ಆದರೆ ಒಂದು ಹೊಟೇಲ್‌ನಲ್ಲಿ ಬೀಫ್ ಖಾದ್ಯ ಇದೆ ಎಂದು ಹೊಟೇಲಿಗೆ ನುಗ್ಗಿ ದಾಂಧಲೆ ಮಾಡುವುದು, ಪೊಲೀಸರು ನುಗ್ಗುವುದು ಇದೆಲ್ಲಾ ಸರಿಯಲ್ಲ.
ಪೊಲೀಸರು ಕೂಡಾ ಯಾರು ಸಂತ್ರಸ್ತ ಇದ್ದಾನೆಯೋ ಆತನನ್ನು ಕರೆದು ಠಾಣೆಯಲ್ಲಿ ವಿಚಾರಣೆ ಮಾಡಬಹುದು. ಆದರೆ ಹಿಂದು ಸಂಘಟನೆಗಳ ಜೊತೆ ಸೇರಿ ಪೊಲೀಸರು ಕೂಡಾ ಈ ರೀತಿ ವರ್ತನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ನಾವು ಪ್ರತ್ಯೇಕ ಸಭೆಯನ್ನು ನಡೆಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಧ್ಯಕ್ಷ ಇರ್ಶಾದ್ ಯು. ಟಿ., ಪದಾಧಿಕಾರಿಗಳಾದ ಅಲಿ ಹಸನ್, ವಹಾಬ್ ಕುದ್ರೋಳಿ, ಅಬ್ದುಲ್ ಸಲಾಂ ಉಚ್ಚಿಲ, ಇಮ್ರಾನ್ ಅವರು ಉಪಸ್ಥಿತರಿದ್ದರು.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…