ಮಂಗಳೂರು: ಹುಲಿ ವೇಷಧಾರಿ ಜಯಾನಂದ ಆಚಾರ್ಯ ಕೊಲೆ ಪ್ರಕರಣ : ಆರೋಪಿಯ ಬಂಧನ – Vishwanews24
ಮಂಗಳೂರು: ಹುಲಿ ವೇಷಧಾರಿ ಜಯಾನಂದ ಆಚಾರ್ಯ ಕೊಲೆ ಪ್ರಕರಣ : ಆರೋಪಿಯ ಬಂಧನ
ಮಂಗಳೂರು: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹೆಣ್ಣಿನ ವೇಷಧಾರಿಯಾಗಿದ್ದ ಜಯಾನಂದ (65) ಆಚಾರ್ಯರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಆರೋಪಿಯನ್ನು ಕುಂಜತ್ಬೈಲ್ ದೇವಿನಗರದ ನಿವಾಸಿ ರಾಜೇಶ್ ಪೂಜಾರಿ (37) ಎಂಬಾತನನ್ನು ಬಂಧಿಸಿರುವ ಕಾವೂರು ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ : ಕೆನರಾ ಜ್ಯುವೆಲ್ಲರಿಯಲ್ಲಿ ಉಂಗುರ ಕದ್ದು ಸಿಕ್ಕಿ ಬಿದ್ದ ಕಳ್ಳ… Vishwanews24
ಹುಲಿ ವೇಷಧಾರಿಯಾಗಿದ್ದ ಜಯಾನಂದ ಆಚಾರ್ಯರ ಮೃತದೇಹ ಕುತ್ತಿಗೆಗೆ ದಾರ ಬಿಗಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು.
ಈ ಬಗ್ಗೆ ಜಯಾನಂದರ ಸಹೋದರ ಅಚ್ಚುತ ಆಚಾರ್ಯ ಎಂಬವರು ಕೊಲೆ ಶಂಕೆ ವ್ಯಕ್ತಪಡಿಸಿ ಕಾವೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ ಕಾವೂರು ಠಾಣೆಯ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ರಾಜೇಶ್ ಪೂಜಾರಿ ಕೊಲೆ ತಿಳಿದುಬಂದಿದ್ದು, ಆತನನ್ನು ನಿನ್ನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

