ಮಂಗಳೂರು: 50 ವರ್ಷಗಳಿಂದ ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದ, ಮಂಗಳೂರಿಗರಿಗೆ ಹೆಮ್ಮೆಯ ಗುರುತಾಗಿದ್ದ ‘ಜ್ಯೋತಿ ಟಾಕೀಸ್’ ಎಂದು ಜನಪ್ರಿಯವಾಗಿರುವ ಜ್ಯೋತಿ ಚಿತ್ರಮಂದಿರ ಇನ್ನು ಬರೀ ನೆನಪು ಮಾತ್ರ. ಲಾಕ್‌ಡೌನ್ ಪರಿಣಾಮ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರವಿನ್ನು ಶಾಶ್ವತವಾಗಿ ಮುಚ್ಚಲಿದೆ. ಇದು ನಗರದ ಸಿನಿ ಪ್ರೇಮಿಗಳಿಗೆ ಅತ್ಯಂತ ದುಃಖದ ಸಂಗತಿ ಎನಿಸಿದೆ. ಏಕೆಂದರೆ ಈ ಚಿತ್ರಮಂದಿರ ಅನೇಕ ಸಿನಿಮಾ ಪ್ರಿಯರಿಗೆ ಅದರಲ್ಲಿಯೂ ವಿಶೇಷವಾಗಿ ತುಳು ಸಿನೆಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿತ್ತು.
ಮೂಲಗಳ ಪ್ರಕಾರ, ಕರ್ನಾಟಕ ಥಿಯೇಟರ್ಸ್ ಯುನಿಟ್ ಲಿಮಿಟೆಡ್ ಮುಂಬೈ ಮೂಲದ ಬಿಲ್ಡರ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಹಲವಾರು ವರ್ಷಗಳ ಹಿಂದೆ ಮಾಡಲಾಗಿತ್ತು ಆದರೆ ತಾಂತ್ರಿಕ ತೊಂದರೆಯಿಂದ ಇದುವರೆಗೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಈಗ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಿತ್ರಮಂದಿರ ಮುಚ್ಚಿರುವುದರಿಂದ,ಚಿತ್ರಮಂದಿರವನ್ನು ಇನ್ನೆಂದೂ ತೆರೆಯಲಾಗುವುದಿಲ್ಲ ಎಂದು ಹೇಳಲಾಗಿದೆ.. ವಾಣಿಜ್ಯ ಸಂಕೀರ್ಣದ ಕೆಲಸವು ಜನವರಿ ಅಥವಾ ಫೆಬ್ರವರಿ 2021 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್,ಅಂಬರೀಶ್ ಮತ್ತಿತರರು ಸೇರಿದಂತೆ ಹಲವಾರು ಸ್ಯಾಂಡಲ್ ವುಡ್ ಚಲನಚಿತ್ರ ತಾರೆಯರು ತಮ್ಮ ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.
ಚಿತ್ರಮಂದಿರಕ್ಕೆ 50 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದ್ದರೂ, ಕೆಲವು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಹೊರತುಪಡಿಸಿ ತುಳು ಚಲನಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರ ಇದು. ಪ್ರಾದೇಶಿಕ ಸಿನೆಮಾದ ಅಭಿಮಾನಿಗಳು ಜ್ಯೋತಿ ಟಾಕೀಸ್‌ಗೆ ಆದ್ಯತೆ ನೀಡುತ್ತಿದ್ದರು. ಏಕೆಂದರೆ ದು ವಾರಕ್ಕೊಮ್ಮೆ ತುಳು ಮತ್ತು ಕನ್ನಡ ಚಲನಚಿತ್ರಗಳ ಪ್ರದರ್ಶನದ ವೇದಿಕೆಯಾಗಿತ್ತು. ಇಲ್ಲಿಯವರೆಗೆ, ತುಳು ಚಲನಚಿತ್ರಗಳ ನಿರ್ಮಾಪಕರು ಜ್ಯೋತಿ ಚಿತ್ರಮಂದಿರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ.
ಇನ್ನು ಇತ್ತೀಚೆಗೆ ಮಂಗಳೂರಿನ ಮತ್ತೊಂದು ಚಿತ್ರಮಂದಿರ ಸೆಂಟ್ರಲ್ ಸಹ ಶಾಶ್ವತವಾಗಿ ಬಾಗಿಲು ಮುಚ್ಚಿತ್ತು. ಇದೀಗ ಅದರ ಸಾಲಿಗೆ ಜ್ಯೋತಿ ಟಾಕೀಸ್ ಸಹ ಸೇರುತ್ತಿದೆ. ತುಳು ಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿರುವವರಿಗೆ ಇದು ಒಂದು ಭಾವನಾತ್ಮಕ ಸಂಗತಿ.
ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…
ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…
ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…
ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…
ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…
ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…