ಮಂಗಳೂರು : 8 ಇಂಡಿಗೋ ವಿಮಾನಗಳು ರದ್ದು – vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ಬೆಂಗಳೂರು ಹಾಗೂ ಮುಂಬಯಿಗೆ ತೆರಳಬೇಕಿದ್ದ ಹಾಗೂ ಆಗಮಿಸಬೇಕಾಗಿದ್ದ 8 ಇಂಡಿಗೋ ವಿಮಾನಗಳು ರದ್ದು

ಮಂಗಳೂರು : ನಗರದ ವಿಮಾನ ನಿಲ್ದಾಣದಿಂದ ಬುಧವಾರ ಬೆಂಗಳೂರು ಹಾಗೂ ಮುಂಬಯಿಗೆ ತೆರಳಬೇಕಿದ್ದ ಹಾಗೂ ಆಗಮಿಸಬೇಕಾಗಿದ್ದ 8 ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ 3, ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ 3, ಮುಂಬಯಿಯಿಂದ ಮಂಗಳೂರಿಗೆ 1 ಹಾಗೂ ಮಂಗಳೂರಿನಿಂದ ಮುಂಬಯಿಗೆ ತೆರಳಬೇಕಿದ್ದ 1 ವಿಮಾನಗಳು ರದ್ದಾಗಿವೆ. ಡಿ.11 ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ 3, ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ 3, ಮುಂಬಯಿಯಿಂದ ಮಂಗಳೂರಿಗೆ 1 ಹಾಗೂ ಮಂಗಳೂರಿನಿಂದ ಮುಂಬಯಿಗೆ ತೆರಳುವ 1 ವಿಮಾನ ಹಾರಾಟ ರದ್ದು ಗೊಂಡಿದೆ.

ಥೈಲ್ಯಾಂಡ್ ಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಗೋವಾ ನೈಟ್​ಕ್ಲಬ್​ ಮಾಲೀಕರ ಬಂಧನ – vishwanews24

ಡಿ.12 ಮತ್ತು 13ರಂದು ಬೆಂಗಳೂರಿನಿಂದ ಮಂಗಳೂರಿಗೆ 2, ಮಂಗಳೂರಿನಿಂದ ಬೆಂಗಳೂರಿಗೆ 2, ಮುಂಬಯಿಯಿಂದ ಮಂಗಳೂರಿಗೆ 1 ಹಾಗೂ ಮಂಗಳೂರಿ ನಿಂದ ಮುಂಬಯಿಗೆ 1 ವಿಮಾನ ಹಾರಾಟ ರದ್ದುಗೊಂಡಿದೆ. ಇಂಡಿಗೋ ಸಂಸ್ಥೆ ಡಿ.13ರ ತನಕ ವಿಮಾನ ರದ್ದು ಮಾಡಿರುವುದರಿಂದ ಟಿಕೆಟ್‌ ಕಾದಿರಿಸಿದವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Leave a Reply