ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ ನಿಧನ – vishwanews24
ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ ನಿಧನ
ಮಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ ಆ.27ರಂದು ನಿಧನರಾಗಿದ್ದಾರೆ. 39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಅಂಗಮಾಲಿಯಲ್ಲಿ ಫುಟ್‌ಬಾಲ್ ಆಡುವಾಗ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಅನಿಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ (ಆ.27) ರಾತ್ರಿ ಅವರು ವಿಧಿವಶರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣ : ಮಲಯಾಳಂ ನಟ ಸಿದ್ದಿಖಿ ವಿರುದ್ಧ ಎಫ್ ಐಆರ್ ದಾಖಲು !- vishwanews24
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ಜೊತೆ ತಲ್ಲುಮಲ ಮತ್ತು ಥೇಕ್ಕು ವಡಕ್ಕು ಸೇರಿ ಅನೇಕ ಸಿನಿಮಾಗಳಲ್ಲಿ ಅನಿಲ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಇದೀಗ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.
