ಮಂಡ್ಯ ಲೋಕಸಭಾ ಕ್ಷೇತ್ರ : 25000 ಮತಗಳ ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡ ಪಕ್ಷೇತರ ಅಭ್ಯರ್ಥಿ-Vishwanews24
ಮಂಡ್ಯ,:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಮುನ್ನಡೆ ಸಾಧಿಸಿದ್ದಾರೆ. ಸುಮಲತಾರವರು 25000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಅತೀ ಸೂಕ್ಷ್ಮ ಕ್ಷೇತ್ರವಾಗಿರುವ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯವರು ನಿರಂತರ ಮುನ್ನಡೆ ಸಾಧಿಸಿದ್ದು, ಇದೀಗ ಸುಮಲತಾರವರು ಮುನ್ನಡೆ ಸಾಧಿಸಿದ್ದಾರೆ.
ಮಂಡ್ಯದಲ್ಲಿ ವಿಜಯಪತಾಕೆ ಯಾರು ಹಾರಿಸುತ್ತಾರೆ ಎಂದು ತಿಳಿಯಲು ಮತ ಎಣಿಕೆಯ ಕೊನೆಯ ಕ್ಷಣದವರೆಗೂ ಕಾಯಬೇಕಾಗಿದೆ. ಯಾಕಂದರೆ ಇಲ್ಲಿ, ನಿಖಿಲ್ ಹಾಗೂ ಸುಮಲತಾ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದ್ದು,ಇಬ್ಬರ ನಡುವೆ ಮುನ್ನಡೆ ಹಿನ್ನಡೆ ಕಂಡುಬರುತ್ತಿದೆ. ಫೈನಲ್ ರಿಸಲ್ಟ್ ಕೊನೆಯ ಹಂತದಲ್ಲಿ ಅಷ್ಟೇ ತಿಳಿದು ಬರಲು ಸಾಧ್ಯ.
