ಮಂಡ್ಯ ಹನಿಟ್ರ್ಯಾಪ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ; ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು – Vishwanews24
ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ; ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು ; ರೂಮಿನಲ್ಲಿದ್ದ ಯುವತಿಯಿಂದಲೇ ಜಗನ್ನಾಥ ಶೆಟ್ಟಿಗೆ ಖೆಡ್ಡಾ
ಮಂಡ್ಯ: ಜಿಲ್ಲೆಯಲ್ಲಿ ಚಿನ್ನದಂಗಡಿ ಮಾಲೀಕನ ಹನಿಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಜಗನ್ನಾಥ್ ಶೆಟ್ಟಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತು. ಜಗನ್ನಾಥ್ ಶೆಟ್ಟಿ ಜೊತೆಗೆ ಲಾಡ್ಜ್‌ನಲ್ಲಿ ಸಿಕ್ಕಿಕೊಂಡಿದ್ದ ಯುವತಿ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆಯಾಗಿದ್ದಾಳೆ. ಆ ಯವತಿ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ.
ಇನ್ನು ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ರೂಂ ಪಡೆದು, ಯುವತಿಯೊಂದಿಗೆ ಜಗನ್ನಾಥ ಶೆಟ್ಟಿ ಇರೋ ಮಾಹಿತಿ ತಿಳಿದಂತ ಸಲ್ಮಾ ಗ್ಯಾಂಗ್, ದಿಢೀರ್ ಅವರ ರೂಂ ಗೆ ದಾಳಿ ನಡೆಸಿತ್ತು. ದಾಳಿಯ ವೇಳೆಯಲ್ಲಿ ವೀಡಿಯೋ ಕೂಡ ಚಿತ್ರೀಕರಣ ಮಾಡಿಕೊಂಡಿತ್ತು. ಜೊತೆಗೆ ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿಯವರನ್ನು ಮನಬಂಧಂತೆ ಥಳಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು.
ಯುವತಿ ಚಿಕ್ಕಪ್ಪ ಎಂದು ನಟಿಸಿ ಜಗನ್ನಾಥ ಶೆಟ್ಟಿಯನ್ನು ಗ್ಯಾಂಗ್ ಲಾಕ್ ಮಾಡಿದ್ದಲ್ಲದೇ ಈ ವೀಡಿಯೋವನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಜಗನ್ನಾಥ್ ಶೆಟ್ಟಿ ಬಳಿ ಬೇಡಿಕೆ ಇಟ್ಟಿದೆ. ಇದರಿಂದ ಭಯಭೀತನಾಗಿ ನಿಜಕ್ಕೂ ಯುವತಿಯ ಚಿಕ್ಕಪ್ಪನೇ ಬಂದಿದ್ದಾನೆಂದು ನಂಬಿ ಲಕ್ಷ, ಲಕ್ಷ ಹಣಕೊಟ್ಟವನ್ನು ಗ್ಯಾಂಗ್‍ಗೆ ಜಗನ್ನಾಥ್ ಶೆಟ್ಟಿ ನೀಡಿದ್ದಾನೆ. ಆದರೆ ಎಷ್ಟೇ ಹಣ ಕೊಟ್ಟರೂ ಇವರ ಹಾವಳಿ ನಿಲ್ಲದೇ ಇದ್ದಾಗ ಜಗನ್ನಾಥ್ ಶೆಟ್ಟಿ ಪೊಲೀಸರ ಮೊರೆ ಹೋಗಿದ್ದಾನೆ. ಫೆಬ್ರುವರಿ 26ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಆಗಸ್ಟ್ 19 ರಂದು ಮರ್ಯಾದೆಗೆ ಅಂಜಿ ಅಪಹರಣ ಮತ್ತು ಬ್ಲಾಕ್ ಮೇಲ್ ದೂರನ್ನು ಜಗನ್ನಾಥ್ ಶೆಟ್ಟಿ ನೀಡಿದ್ದಾನೆ.
ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಆಯರೋನ್ ಫಿಂಚ್ – Vishwanews24
