Featured

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ – viswhanews24

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ

ಆ.27ರಂದು ಧ್ವಜಾರೋಹಣ, ಗೋ ಅಶ್ವಪೂಜೆ ನೆರವೇರಿಸುವ ಮೂಲಕ ಆರಾಧನೆಗೆ ಚಾಲನೆ

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಆ.27ರಿಂದ ಸೆ.2ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಆ.29ರಂದು ಪೂರ್ವಾರಾಧನೆ, 30ರಂದು ಮಧ್ಯಾರಾಧನೆ ಹಾಗೂ 31ರಂದು ಉತ್ತಾರಾಧನೆ ಜರುಗಲಿದೆ. ಆ.27ರಂದು ಧ್ವಜಾರೋಹಣ, ಗೋ ಅಶ್ವಪೂಜೆ ನೆರವೇರಿಸುವ ಮೂಲಕ ಆರಾಧನೆಗೆ ಚಾಲನೆ ನೀಡಲಾಗುವುದು.

ಆ.29ರಂದು ಉತ್ತಾರಾಧನೆ ನಡೆಯಲಿದ್ದು, ಅಂದು ಸಂಜೆ ಅನುಗ್ರಹ ಪ್ರಶಸ್ತಿ ಪ್ರದಾನ ಜರುಗಲಿದೆ. ಶ್ರೀಮಠದ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾದ ನಾಗರ ಹಳ್ಳಿ ವಾದಿರಾಜಾಚಾರ್ಯ ಹಾಗೂ ತಾಂಜಾ ವೂರಿನ ಶಾಸ್ತ್ರ ವಿಶ್ವವಿದ್ಯಾಲಯದ ಉಪ ಕುಲಪತಿ ವೈದ್ಯನಾಥನ್ ಸುಬ್ರಮಣಿಯನ್ ಅವರಿಗೆ ಈ ಬಾರಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.30ರಂದು ಮಧ್ಯಾರಾಧನೆ ಜರುಗಲಿದ್ದು, ವಿಶೇಷ ಪಂಚಾಮೃತ ಅಭಿಷೇಕ ಜರುಗಲಿದೆ. ಮಠದ ಪ್ರಾಂಗಣದಲ್ಲಿ ಪ್ರಹ್ಲಾದರಾಜರ ಚಿನ್ನದ ರಥೋತ್ಸವ ಜರುಗಲಿದೆ. ಆ.31ರಂದು ಉತ್ತಾರಾಧನೆ ಜರುಗಲಿದ್ದು, ವಸಂತೋತ್ಸವ ಹಾಗೂ ಮಠದ ರಥಬೀದಿಯಲ್ಲಿ ರಾಯರ ರಥೋತ್ಸವ ಜರುಗಲಿದೆ.
ಸೆ.1ರಂದು ಶ್ರೀಮಠದ ಪೂರ್ವ ಪೀಠಾಧಿಪತಿಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನಾ ಮಹೋತ್ಸವ ಜರುಗಲಿದೆ. ಸೆ.2ರಂದು ಸರ್ವ ಸಮರ್ಪಣ ಮಹೋತ್ಸವದೊಂದಿಗೆ ಆರಾಧನಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದರು.

Vishwa News 24

Recent Posts

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್ – vishwanews24

ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಪ್ರಯಾಗ್‌ರಾಜ್: ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್…

4 minutes ago

ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಆರಂಭಿಸಿ : ಕರವೇ ಆಗ್ರಹ – vishwanews24

ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಆರಂಭಿಸಿ : ಕರವೇ ಆಗ್ರಹ ಸೆ.30ರೊಳಗೆ ಆಸ್ಪತ್ರೆಯ ಸೇವೆ ಆರಂಭಿಸದಿದ್ದರೆ ಅ.1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯ ಎಚ್ಚರಿಕೆ…

34 minutes ago

ಮಂಗಳೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ; ಧರ್ಮಸ್ಥಳಕ್ಕೆ ಭೇಟಿ – vishwanews24

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಹಿನ್ನೆಲೆ: ಮಂಗಳೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ; ಧರ್ಮಸ್ಥಳಕ್ಕೆ ಭೇಟಿ ಮಂಗಳೂರು: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್…

45 minutes ago

ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ – vishwanews24

ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ ಉಡುಪಿ: ಹಿಂದಿನ ಮತದಾರರ ಪಟ್ಟಿಯೊಂದಿಗೆ ಮತದಾರರ ವಿವರಗಳನ್ನು ಜೋಡಿಸಲು ಸಾಧ್ಯವಾಗದ…

58 minutes ago

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ನ ಆಹಾರ ಪರವಾನಗಿ ಅಮಾನತು – vishwanews24

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿ ಅಮಾನತು ಬೆಂಗಳೂರು: ವಿಷಕಾರಿ ದತ್ತೂರ ಬೀಜಗಳನ್ನು…

1 hour ago

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  – vishwanews24

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  ಉಡುಪಿ: ಉದ್ಯಮಿ…

1 hour ago