ಮಗನ ಹುಟ್ಟು ಹಬ್ಬವನ್ನು ಅಂಗವಿಕಲರಿಗೆ ಪಡಿತರ ಕಿಟ್ ವಿತರಿಸಿ ಆಚರಿಸಿದ ಬೆಳಪು ದೇವಿಪ್ರಸಾದ್ ಶೆಟ್ಟಿ.:vishwanews24
ಮಗನ ಹುಟ್ಟು ಹಬ್ಬವನ್ನು ಅಂಗವಿಕಲರಿಗೆ ಪಡಿತರ ಕಿಟ್ ವಿತರಿಸಿ ಆಚರಿಸಿದ ಬೆಳಪು ದೇವಿಪ್ರಸಾದ್ ಶೆಟ್ಟಿ.
ಕಾಪು: ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿಯ ಸುಪುತ್ರ ಪ್ರಜ್ವಲ್ ಡಿ ಶೆಟ್ಟಿಯ ಹುಟ್ಟು ಹಬ್ಬದ ಪ್ರಯುಕ್ತ ಅಂಗವಿಕಲರಿಗೆ ಪಡಿತರ ಕಿಟ್ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.
ಪಣಿಯೂರಿನ ತೋಟದಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ದೇವಿಪ್ರಸಾದ್ ಶೆಟ್ಟಿ ಮಾತಾಡಿ ” ಕೊರೋನಾ ಎಂಬ ಮಹಾಮಾರಿ ವಿಶ್ವವನ್ನು ವ್ಯಾಪಿಸಿದೆ ಹಾಗಾಗಿ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಿಲ್ಲ,ಭಾರತ ಲಾಕ್-ಡೌನ್ ನಿಂದ ಜನ ಸಮಸ್ಯೆಯಲ್ಲಿ ಸಿಲುಕಿಗೊಂಡಿದ್ದು ಹಾಗಾಗಿ ಮಗನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಗ್ರಾಮದ ಅಂಗವಿಕಲ ಕುಟುಂಬವನ್ನು ಗಮನಿಸಿ ಅವರಿಗೆ ಪಡಿತರ ವಿತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಿರುತ್ತೇವೆ ಎಂದರು”
ಈ ಸಂಧರ್ಭದಲ್ಲಿ ಪ್ರಜ್ವಲ್ ಡಿ ಶೆಟ್ಟಿ, ಮಹಮ್ಮದ್ ಜಹೀರ್ ಮೊದಲಾದವರು ಉಪಸ್ಥಿತರಿದ್ದರು.



