ಮಗು ದತ್ತು ಪ್ರಕರಣ: ಸೋನು ಶ್ರೀನಿವಾಸ್‌ ಗೌಡಗೆ ಜಾಮೀನು ಮಂಜೂರು – Vishwanews24

Featured, ರಾಜ್ಯ ನ್ಯೂಸ್

ಮಗು ದತ್ತು ಪ್ರಕರಣ: ಸೋನು ಶ್ರೀನಿವಾಸ್‌ ಗೌಡಗೆ ಜಾಮೀನು ಮಂಜೂರು

ಬೆಂಗಳೂರು : ಕಾನೂನು ಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪದ ಮೇಲೆ ಅರೆಸ್ಟ್ ಆಗಿ ಜೈಲಿನಲ್ಲಿರುವ ಸೋಶಿಯಲ್ ಮಿಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ ಅವರಿಗೆ ಬೆಂಗಳೂರಿನ ನ್ಯಾಯಾಲಯಜಾಮೀನು ಮಂಜೂರು ಮಾಡಿದೆ.

8 ವರ್ಷದ ಹೆಣ್ಣು ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಸೋನು ಗೌಡ ಅವರನ್ನು ಮಾರ್ಚ್ 22 ರಂದು ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಸೋನು ಗೌಡರನ್ನು ವಶಕ್ಕೆ ಪಡೆದಿದ್ದರು.

ಪಡುಬಿದ್ರಿ: ಟೈಮಿಂಗ್  ವಾಗ್ವಾದ: ಬಸ್ಸನ್ನು ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿದ ಚಾಲಕ ; ದೂರು ದಾಖಲು – Vishwanews24

ಜಾಮೀನು ಕೋರಿ ಸೋನು ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಪಿಡಿಜೆ ಕೋರ್ಟ್‌ ಸೋನು ಗೌಡ ಅವರಿಗೆ ಜಾಮೀನು ಮಂಜೂರು ಮಾಡಲು 1 ಲಕ್ಷ ಬಾಂಡ್‌, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲು ಕೋರ್ಟ್‌ ಒಪ್ಪಿಗೆ ನೀಡಿದೆ. ಈ ಎಲ್ಲಾ ಷರತ್ತುಗಳನ್ನು ಪಾಲಿಸಿದ ನಂತರ ಸೋನು ಶ್ರೀನಿವಾಸ ಗೌಡ ಅವರು ಬಿಡುಗಡೆಯಾಗಲಿದ್ದಾರೆ.

ಪಡುಬಿದ್ರಿ: ಟೈಮಿಂಗ್  ವಾಗ್ವಾದ: ಬಸ್ಸನ್ನು ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿದ ಚಾಲಕ ; ದೂರು ದಾಖಲು – Vishwanews24

Leave a Reply