ಮಡಿಕೇರಿ: ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರನ್ನು ಕರೆಸಿ ಕಾಮದಾಟ ಹಾಗೂ ಮೃತಪಟ್ಟ ಮಹಿಳೆಯರ ನಗ್ನ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುಕೊಂಡು ಶವಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ.
ಕೊಡಗು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಸೈಯ್ಯದ್ ಎಂಬಾತ ಈ ಹೇಯ ಕೃತ್ಯವನ್ನು ಎಸಗಿದ ವ್ಯಕ್ತಿಯಾಗಿದ್ದಾನೆ. ಸಯ್ಯದ್ 2021ರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ. ಈತನಿಗೆ ಕೋವಿಡ್ ಸಂದರ್ಭದಲ್ಲಿ ತುಂಬಾ ಶ್ರಮಿಸಿದ್ದಾನೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಶಂಸಿಸಿ ಸನ್ಮಾನಿಸಿದ್ದರು.
ಆದರೆ ಸೈಯ್ಯದ್ ಶವಾಗಾರದಲ್ಲಿ ಕೆಲಸ ಮಾಡಿಕೊಂಡೇ ಹೊರಪ್ರಪಂಚಕ್ಕೆ ಗೊತ್ತಾಗದಂತೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಕರೆಮಾಡಿ ಶವಾಗಾರಕ್ಕೆ ಕರೆಸಿಕೊಳ್ಳುತ್ತಿದ್ದ. ಶವಗಾರದಲ್ಲೇ ತನ್ನ ಹಲವು ಮಹಿಳೆಯರ ಜೊತೆ ಸೆಕ್ಸ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಅಪಘಾತ ಸೇರಿದಂತೆ ನಾನಾ ರೀತಿಯಲ್ಲಿ ಸತ್ತು ಶವಾಗಾರಕ್ಕೆ ಸೇರುತ್ತಿದ್ದ ಮಹಿಳೆಯರ ನಗ್ನ ಫೋಟೋಗಳನ್ನು ತೆಗೆದು ತನ್ನ ಮೊಬೈಲ್‍ನಲ್ಲೂ ಇಟ್ಟುಕೊಂಡಿದ್ದ. ಇದನ್ನೂ ಓದಿ: ಜನವರಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚಲಕ್ಕಿ ಲಭ್ಯ – Vishwanews24
ಸೈಯದ್ ತಿಂಗಳ ಹಿಂದೆ ಮಡಿಕೇರಿ ನಗರದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿ ಈ ವೇಳೆ ಜನರಿಗೆ ಸಿಕ್ಕಿಬಿದ್ದಿದ್ದ. ಆಗ ಆತನಿಗೆ ಗೂಸಾ ಕೊಟ್ಟಿದ್ದ ಜನರು ಆತನ ಫೋನ್ ಅನ್ನು ಪೊಲೀಸ್ ವಶಕ್ಕೆ ನೀಡಿದ್ದರು. ಆತನ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಆತನ ಯಾರೊಂದಿಗೆಲ್ಲಾ, ಏನೆಲ್ಲಾ ಮಾತನಾಡಿದ್ದಾನೆ ಎನ್ನುವುದು ಬಟಾಬಯಲಾಗಿದೆ.
ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ. ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ. ಇದನ್ನೂ ಓದಿ: ಉಡುಪಿ: ಕರ್ತವ್ಯಲೋಪ -ಬೈಂದೂರು BEO ಮಂಜುನಾಥ್ ಅಮಾನತು ಮಾಡಿದ ಸರ್ಕಾರ – Vishwanews24
ಸಯ್ಯದ್‍ನ ದುಷ್ಕೃತ್ಯ ಗೊತ್ತಾಗುತ್ತಿದ್ದಂತೆ ಸಯ್ಯದ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್‍ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಕಾರಿಯಪ್ಪ ಅವರು ಸಯ್ಯದ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಇದೀಗ ಘಟನೆ ಸಂಬಂಧಿಸಿ ಮಡಿಕೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…