ಮಣಿಪಾಲ : ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ – vishwanews24
ಮಣಿಪಾಲ : ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ
ಮಣಿಪಾಲ: ಬಾಲಕಿಯೊಬ್ಬಳು ಪ್ಲಾಟ್ ಒಂದರ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೆರ್ಗಾ ಗ್ರಾಮದ ಸರಳೇಬೆಟ್ಟುವಿನಲ್ಲಿ ನವೆಂಬರ್ 5 ರಂದು ನಡೆದಿದೆ.
ಮೃತಳನ್ನು ಪ್ರಜ್ಞಾ (13) ಎಂದು ಗುರುತಿಸಲಾಗಿದೆ. ಸರಳೇಬೆಟ್ಟು ಹೈಪಾಯಿಂಟ್ ಹೈಟ್ಸ್ ವಸತಿ ಸಮುಚ್ಛಯದ ಎಂಟನೇ ಮಹಡಿಯಿಂದ ಪ್ರಜ್ಞಾ ಕೆಳಗೆ ಹಾರಿದ್ದಾರೆ ಎಂದು ಹೇಳಲಾಗಿದ್ದು, ಕೆಳಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಈಕೆ ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
