ಮತ್ತೆ ಮಿಗ್ 21 ಜೆಟ್ನ ಹಾರಾಟವನ್ನು ನಡೆಸಲು ಆರಂಭಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ -Vishwanews24
ನವದೆಹಲಿ: ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ಭವಿಸಿದ್ದ ಮಿಲಿಟರಿ ಮುಖಾಮುಖಿಯ ಸಂದರ್ಭ ಖ್ಯಾತಿಗೆ ಬಂದ ವಾಯುಸೇನೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತೆ ಮಿಗ್ 21 ಜೆಟ್ನ ಹಾರಾಟವನ್ನು ನಡೆಸಲು ಆರಂಭಿಸಿದ್ದಾರೆ.
ಫೆಬ್ರವರಿ 27 ರಂದು ಭಾರತದ ವಾಯುಪ್ರದೇಶದೊಳಗೆ ನುಗ್ಗಲು ಯತ್ನಿಸಿದ್ದ ಪಾಕಿಸ್ಥಾನದ ಯುದ್ಧ ವಿಮಾನವನ್ನು ತಮ್ಮ ಮಿಗ್ 21 ವಿಮಾನದಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ ಅಭಿನಂದನ್ ಪಾಕಿಸ್ಥಾನ ಪ್ರದೇಶದಲ್ಲಿ ಬಿದ್ದು ಅಲ್ಲಿ ಎರಡು ದಿನಗಳ ಕಾಲ ಯುದ್ಧ ಕೈದಿಯಾಗಿದ್ದರು. ಆ ವೇಳೆ ಅವರ ದೇಹದ ವಿವಿಧ ಭಾಗಗಳಿಗೆ ಗಾಯಗಳೂ ಆಗಿತ್ತು. ಅದಾದ ಆರು ತಿಂಗಳ ನಂತರ ವರ್ತಮಾನ್ ಅವರು ಮತ್ತೆ ಫೈಟರ್ ಕಾಕ್ಪಿಟ್ಗೆ ಮರಳಿದ್ದಾರೆ.

ಜಾಹಿರಾತು
ವೈಮಾನಿಕ ಮುಖಾಮುಖಿಯ ಸಮಯದಲ್ಲಿ ಪಾಕಿಸ್ಥಾನದ ಎಫ್ -16 ಜೆಟ್ ಅನ್ನು ಉರುಳಿಸಿದ್ದಕ್ಕಾಗಿ ಅಭಿನಂದನ್ ಅವರಿಗೆ ಶೌರ್ಯ ಪದಕ ವೀರ ಚಕ್ರವನ್ನು ನೀಡಿ ಪುರಸ್ಕರಿಸಲಾಗಿದೆ.
ಪಾಕಿಸ್ಥಾನದಿಂದ ಹಿಂದಿರುಗಿದ ಕೆಲವು ದಿನಗಳಲ್ಲೇ, ಅಭಿನಂದನ್ ಅವರು ವಾಯುಸೇನೆಯ ಫೈಟರ್ ಕಾಕ್ಪಿಟ್ಗೆ ಮರಳಬೇಕೆಂಬ ಬಯಕೆಯನ್ನು ತೋಡಿಕೊಂಡಿದ್ದರು.
