ಮಂಗಳೂರು: ರಾಣಿ ಅಬ್ಬಕ್ಕ ಆಳಿದ ಉಳ್ಳಾಲವೀಗ ಹೆಸರು ಬದಲಾಯಿಸಿಕೊಂಡು ‘ಮಂಗಳೂರು’ ವಿಧಾನಸಭಾ ಕ್ಷೇತ್ರವಾಗಿದೆ. ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿನಿಧಿಸುವ ಕ್ಷೇತ್ರವಿದು.
ಖಾದರ್ ತಂದೆ ಯು.ಟಿ.ಫರೀದ್ ಇದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದವರು. ಅವರ ನಿಧನಾನಂತರ ಮಗ ಯು.ಟಿ.ಖಾದರ್ 2007ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು. ಬಳಿಕ 2008 ಹಾಗೂ 2013ರ ಚುನಾವಣೆಗಳಲ್ಲೂ ಅವರು ಗೆದ್ದರು. ಮುಸ್ಲಿಂ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 9 ಮುಸ್ಲಿಂ ಪ್ರತಿಸ್ಪರ್ಧಿಗಳೇ ಇದ್ದರೂ, 29,111 ಮತಗಳ ಅಂತರದಲ್ಲಿ ಖಾದರ್ ಗೆದ್ದು ಬಂದಿದ್ದು ವಿಶೇಷ.
ಅಭಿವೃದ್ಧಿ ಕಾರ್ಯಗಳಲ್ಲಿ ಖಾದರ್ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ಬದುಕಿನ ಪ್ರಾರಂಭದಿಂದಲೂ ಕ್ಲೀನ್ ಇಮೇಜ್ ನಿರ್ವಹಿಸಿಕೊಂಡು ಬಂದಿರುವುದು ಅವರ ಚರಿಷ್ಮಾ ವೃದ್ಧಿಗೆ ಕಾರಣವಾಗಿದೆ. ರಾಜಕೀಯ ರಹಿತವಾಗಿ ಕೆಲಸ ಮಾಡುವ ಯತ್ನವನ್ನು ಮಾಡಿಕೊಂಡಿದ್ದಾರೆ. ಕ್ಷೇತ್ರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿದೆ. ಆದರೆ, ಕೋಮುಗಲಭೆಗಳಲ್ಲಿ ಕೆಲವೊಮ್ಮೆ ಕೋಮುಶಕ್ತಿಗಳಿಗೆ ಖಾದರ್ ಬೆಂಬಲ ನೀಡುತ್ತಾರೆ ಎನ್ನುವುದು ಅವರ ವಿರೋಧಿಗಳ ಆರೋಪ. ಮುಸ್ಲಿಂ ಸಮುದಾಯದಲ್ಲೂ ಕೆಲವು ಕಡೆ ಖಾದರ್ಗೆ ಕೆಲ ವಿಷಯಗಳಲ್ಲಿ ವಿರೋಧವಿದೆ.
ಜಾತ್ಯತೀತ ಜನತಾದಳ ನಗಣ್ಯ
ಕಾಂಗ್ರೆಸ್ ಮಾಜಿ ಮುಖಂಡ ಹಾಗೂ ಮಂಗಳೂರು ಮೇಯರ್ ಕೂಡ ಆಗಿದ್ದ ಕೆ.ಅಶ್ರಫ್ ತಿಂಗಳ ಹಿಂದೆಯಷ್ಟೇ ಜೆಡಿಎಸ್ ಸೇರಿ, ಮಂಗಳೂರಿನಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಅಶ್ರಫ್ ಒಂದಷ್ಟು ಮತ ಸೆಳೆಯಬಹುದಾದರೂ ಖಾದರ್ಗೆ ಸೋಲುಣಿಸಲು ಸಾಧ್ಯವಾಗದು. ಈ ಬಾರಿ ಎಸ್ಡಿಪಿಐ ಕೂಡ ಇಲ್ಲಿ ಸ್ಪರ್ಧಿಸುತ್ತಿಲ್ಲ. ಮಂಗಳೂರು ಸೇರಿ ದಕ್ಷಿಣ ಕನ್ನಡದ ಎಲ್ಲ 8 ಕ್ಷೇತ್ರಗಳಲ್ಲೂ ನೇರ ಫೈಟ್ ಇರುವುದು ಬಿಜೆಪಿ-ಕಾಂಗ್ರೆಸ್ ಮಧ್ಯೆ. ಇಲ್ಲಿ ಜೆಡಿಎಸ್ ಗಮನಾರ್ಹ ನಿರ್ವಹಣೆಯನ್ನೇನೂ ತೋರಿಲ್ಲ.
ಕುಡಿವ ನೀರು ಇಲ್ಲಿ ಸಮಸ್ಯೆ
ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾದುದು. ಇದೇ ಕ್ಷೇತ್ರದ ತುಂಬೆಯಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಾದರೂ ತುಂಬೆ ಆಸುಪಾಸಿನಲ್ಲೇ ಸಮಸ್ಯೆ ಗಂಭೀರವಾಗಿದೆ. ಉಳ್ಳಾಲ ಕಡಲತೀರದುದ್ದಕ್ಕೂ ಕಡಲ್ಕೊರೆತ ಸಮಸ್ಯೆ ಇದೆ. ಪ್ರಾಯೋಗಿಕವಾಗಿ ಬಮ್ರ್ ತಂತ್ರಜ್ಞಾನದ ಕಡಲ್ಕೊರೆತ ನಿರೋಧಕ ಕಾಮಗಾರಿ ನಡೆಸಿದ್ದರೂ ಪೂರ್ತಿ ಯಶಸ್ವಿಯಾಗಿಲ್ಲ. ಕ್ಷೇತ್ರದಲ್ಲಿ ತ್ಯಾಜ್ಯ ಸಮಸ್ಯೆಯೂ ಹೆಚ್ಚಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಯಾರಿಂದಲೂ ಆಗಿಲ್ಲ.
ನಾನಿರುವ ಜಾಗ ಹಿಂದೆ ವಿಟ್ಲ ಕ್ಷೇತ್ರ ವ್ಯಾಪ್ತಿ ಯಲ್ಲಿದ್ದಾಗ ಶಾಸಕರನ್ನು ದೂರದಿಂದಲೇ ನೋಡಬೇಕಾಗಿತ್ತು, ಆದರೆ, ಮಂಗಳೂರು ಕ್ಷೇತ್ರಕ್ಕೆ ಸೇರಿದ ಬಳಿಕ ನಾಲ್ಕು ಮನೆಯಿರುವಲ್ಲಿಗೂ ರಸ್ತೆ ಬಂದಿದೆ. ನೀರಿನ ಸಮಸ್ಯೆ ಪರಿಹಾರವಾಗಿದೆ.
| ಶರೀಫ್ ಸಿ.ಎಂ.ಪಟ್ಟೊರಿ ವರ್ತಕ, ನಡುಪದವು
ಒಮ್ಮೆ ಗೆದ್ದಿದ್ದ ಬಿಜೆಪಿ
ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆ ಮಾತ್ರ ಬಿಜೆಪಿ ಗೆದ್ದಿದೆ. ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವವರು ಸಂತೋಷ್ ಕುಮಾರ್ ರೈ ಬೊಳಿಯಾರ್. ಇವರು ಕ್ಷೇತ್ರದ ಬಿಜೆಪಿ ಅಧ್ಯಕ್ಷರು. ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯರಾದವರು. ಆ ಸಂದರ್ಭ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದವರು. ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡವರು. ಹಿಂದು ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರೂ ಅಲ್ಪಸಂಖ್ಯಾತ ಮಿತ್ರರನ್ನೂ ಹೊಂದಿದವರು. ಕೊಚ್ಚಿನ್ ಮಂಗಳೂರು ಪೈಪ್ಲೈನ್ಗಾಗಿ ಜಾಗ ಕಳೆದುಕೊಳ್ಳುವವರ ಪರ ಹೋರಾಡಿ ಗರಿಷ್ಠ ಮೊತ್ತದ ಪರಿಹಾರ ಒದಗಿಸಿಕೊಡಲು ನೆರವಾದ ಹೆಸರಿದೆ. ಆದರೆ, ಕ್ಷೇತ್ರದ ವಿಸ್ತಾರಕ್ಕೆ ಅವರ ಹೆಸರು ಇನ್ನೂ ತಲಪಿಲ್ಲ. ವರ್ಚಸ್ಸು ಬೆಳೆಸುವ ಅವಶ್ಯಕತೆ ಇದೆ. ಆದರೆ, ಇದೆಲ್ಲದರ ಹೊರತಾಗಿಯೂ ಈ ಕ್ಷೇತ್ರದ ಜಾತಿ ಸಮೀಕರಣವೇ ಇವರಿಗೆ ಋಣಾತ್ಮಕ ಅಂಶ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…