ಮದುವೆ ಫೋಟೋ ತೆಗೆಯುತ್ತಿರುವಾಗ ಹೃದಯಾಘಾತ ; ಫೋಟೋಗ್ರಾಫರ್ ನಿಧನ – vishwanews24
ಮದುವೆ ಫೋಟೋ ತೆಗೆಯುತ್ತಿರುವಾಗ ಹೃದಯಾಘಾತ ;ಫೋಟೋಗ್ರಾಫರ್ ನಿಧನ
ಚಾಮರಾಜನಗರ : ಮದುವೆ ಆರತಕ್ಷತೆಯ ಪೋಟೋ ತೆಗೆಯುತ್ತಿರುವಾಗಲೇ ಪೋಟೋಗ್ರಾಫರ್ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಗ್ರಾಮದ ಮೂರ್ತಿ ಮೃತ ದುರ್ದೈವಿ. ಮದುವೆ ಮಂಟಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಮೂರ್ತಿ ಕುಸಿದು ಬಿದ್ದಿದ್ದು, ಕೊನೆಯುಸಿರೆಳೆದಿದ್ದಾರೆ.
ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ವೇಳೆ ಪರಶಿವಮೂರ್ತಿ ಅವರು ಅತ್ಯಂತ ಉತ್ಸಾಹದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಅವರು ಕಲ್ಯಾಣ ಮಂಟಪದ ವೇದಿಕೆಯ ಮುಂದೆಯೇ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ವಧು-ವರನ ಕಡೆಯವರು ತಕ್ಷಣ ಓಡಿ ಬಂದು ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು.
ಪರಶಿವಮೂರ್ತಿ ಅವರ ಸ್ಥಿತಿ ಗಂಭೀರವಾಗುತ್ತಿರುವುದನ್ನು ಕಂಡು ಮದುವೆ ಮನೆಯವರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆಸ್ಪತ್ರೆಗೆ ತಲುಪುವ ಮೊದಲೇ ಪರಶಿವಮೂರ್ತಿ ಅವರು ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವೈದ್ಯರ ಪ್ರಕಾರ, ತೀವ್ರ ಹೃದಯಾಘಾತ ಸಂಭವಿಸಿರುವುದರಿಂದ ಅವರು ಸಾವನ್ನಪ್ಪಿದ್ದಾರೆ.
ನಗುನಗುತ್ತಾ ಎಲ್ಲರ ಫೋಟೋ ತೆಗೆಯುತ್ತಿದ್ದ ವ್ಯಕ್ತಿ ಕಣ್ಣೆದುರೇ ಮೃತಪಟ್ಟಿರುವುದು ಮದುವೆ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.
