ಮದ್ಯಪ್ರೀಯರಿಗೆ ಬಿಗ್ ಶಾಕ್- ಹೆದ್ದಾರಿ ಬದಿ ಬಾರ್ -ಮದ್ಯದಂಗಡಿ ಇರಬಾರದು-ಸುಪ್ರಿಂ ಕೋರ್ಟ್

Featured, ದೇಶ

ಹೆದ್ದಾರಿ‌ಬದಿಯ ಬಾರ್ -ಮದ್ಯದಂಗಡಿ ಇರಬಾರದು-ಸುಪ್ರಿಂ ಕೋರ್ಟ್

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳು ಇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಪು ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮನವಿ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಅಂಚಿನಿಂದ 500 ಮೀ. ದೂರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಸೂಚಿಸಿದೆ. ಈ ನಿಯಮ ಸರ್ವಿಸ್ ರಸ್ತೆಗೆ ಕೂಡ ಅನ್ವಯವಾಗಲಿದೆ. ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದರೆ 20 ಸಾವಿರ ಮತ್ತು ಅದಕ್ಕಿಂತ ಕಡಿಮೆ ಇರುವ ಜನಸಂಖ್ಯೆ ಇರುವ ಪ್ರದೇಶದಲ್ಲಿ 500 ಮೀಟರ್‌ಗಳಿಂದ 220 ಮೀಟರ್‌ಗೆ ಇಳಿಕೆ ಮಾಡಿ ಆದೇಶ ನೀಡಿದೆ.