ಮಧುಮೇಹ ಹೊಂದಿರುವವರು ಗಿಲ್ಟ್ ಇಲ್ಲದೆ ಯಾವುದೇ ಹಬ್ಬದಲ್ಲಿ ಪಾಲ್ಗೊಳ್ಳಲು ಕೆಲವು ಸಲಹೆಗಳು – vishwanews24

Featured, ರಾಜ್ಯ ನ್ಯೂಸ್, ವಿಶೇಷ ಲೇಖನಗಳು

ಮಧುಮೇಹ ಹೊಂದಿರುವವರು ಗಿಲ್ಟ್ ಇಲ್ಲದೆ ಯಾವುದೇ ಹಬ್ಬದಲ್ಲಿ ಪಾಲ್ಗೊಳ್ಳಲು ಕೆಲವು ಸಲಹೆಗಳು

ಹಬ್ಬ ಹರಿದಿನಗಳಲ್ಲಿ ಸಿಹಿ ಹಂಚುವುದು ಬಹಳ ಸಾಮಾನ್ಯ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಮಧುಮೇಹ ಹೊಂದಿರುವವರಿಗೆ ಬಹಳ ಇಕ್ಕಟ್ಟಾದ ಸನ್ನಿವೇಶಗಳು ಎದುರಾಗುತ್ತದೆ. ಆದರೆ ಮಧುಮೇಹ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ನೀವು ಈಗ ಸಿಹಿ ಭಕ್ಷ್ಯವನ್ನು ತ್ಯಜಿಸುವ ಅವಶ್ಯಕತೆ ಇಲ್ಲ. ಆದರೆ ಎಚ್ಚರಿಕೆಯಿಂದ ಆಯ್ಕೆಗಳನ್ನು ಮಾಡಬೇಕು. ಮಧುಮೇಹ ಸ್ನೇಹಿ ಸಾಮಾಗ್ರಿಗಳಿಂದ ರಚಿಸಿದ ಸಿಹಿ ಖಾದ್ಯವನ್ನು ಆರಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಆರೋಗ್ಯಕರ, ರುಚಿಕರ ಖಾದ್ಯಗಳನ್ನು ಸೇವಿಸಬಹುದು.

ಮಧುಮೇಹ ನಿರ್ವಹಣೆ ಸುಮ್ಮನೆ ಅಲ್ಲ
ಕೇವಲ ಸಿಹಿ ತಿನ್ನುವುದರಿಂದ ಮಾತ್ರವೇ ನಿಮ್ಮ ರಕ್ತದ ಸಕ್ಕರೆ ಮಟ್ಟ ಜಾಸ್ತಿಯಾಗುವುದಲ್ಲ. ಬದಲಿಗೆ ನೀವು ಕಾರ್ಬೋಹೈಡ್ರೇಟ್ ಸೇವನೆಯ ಮೇಲೆ ಹೆಚ್ಚು ಗಮನ ಇಟ್ಟುಕೊಳ್ಳಬೇಕು. ಸಕ್ಕರೆ, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ ಮತ್ತು ಫೈಬರ್ ಅನ್ನು ಒಳಗೊಂಡಂತೆ ಕಾರ್ಬೋಹೈಡ್ರೇಟ್‌ಗಳು ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಸಿಹಿತಿಂಡಿಗಳು ಸಾಮಾನ್ಯವಾಗಿ ಡೆಕ್ಸ್ಟ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ನಂತಹ ಸರಳ ಸಕ್ಕರೆ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಅಂಶದ ಏರಿಕೆಗೆ ಕಾರಣವಾಗಬಹುದು. ಆದರೂ ಬರೀ ಸಕ್ಕರೆಯನ್ನು ದೂರ ಇಡುವುದಕ್ಕೆ ಹೊರತಾದ ಕೆಲವು ಅಂಶಗಳೂ ಇವೆ ಅನ್ನುವುದನ್ನು ನೀವು ಗಮನಿಸತಕ್ಕದ್ದು. ಸಕ್ಕರೆಯ ಬದಲಿಗೆ ಬಳಸಬಹುದಾದ ಕೆಲವು ಸಾಮಾಗ್ರಿಗಳು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬಹುದು. ಅವುಗಳು ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉದ್ದೀಪಿಸುವ ಸಾಧ್ಯತೆ ಇದೆ ಮತ್ತು ಅದು ಹಸಿವು ಹಾಗೂ ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

ಶಬರಿಮಲೆಗೆ ಭೇಟಿ ನೀಡುವ ಭಕ್ತರು ಇರುಮುಡಿಯಲ್ಲಿ ಕರ್ಪೂರ, ಅಗರಬತ್ತಿ ತರುವಂತಿಲ್ಲ : ತಿರುವಾಂಕೂರು ದೇವಸ್ವಂ ಮಂಡಳಿ – vishwanews24

ಉತ್ತಮ ಆರೋಗ್ಯಕ್ಕೆ ನಿಮಗೆ ಸೂಕ್ತವಾದ ಆಹಾರ ಸೇವಿಸಿ
ಆಹಾರದ ವಿಚಾರದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅಂತ ಇದೆ. ಆ ಜಿಐ ಅನ್ನು ಅರ್ಥಮಾಡಿಕೊಳ್ಳುವುದರಿಂದ ನೀವು ಯಾವ ಆಹಾರ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲು ಸಹಾಯ ಆಗುತ್ತದೆ. ಜಿಐ ಇಂಡೆಕ್ಸ್ ಆಹಾರದ ಸ್ಕೋರಿಂಗ್ ವ್ಯವಸ್ಥೆಯಾಗಿದ್ದು, ಅದು ನಿಗದಿ ಆಹಾರವು ನಿಮ್ಮ ಸಕ್ಕರೆ ಮಟ್ಟವನ್ನು ಎಷ್ಟು ಹೆಚ್ಚಿಸಬಲ್ಲದು ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಕಡಿಮೆ ಜಿಐ ಇಂಡೆಕ್ಸ್ ಹೊಂದಿರುವ ಆಹಾರ ಆರೋಗ್ಯಕರ ಆಹಾರವಾಗಿದೆ. ಆದರೆ ಕೆಲವು ಹೆಚ್ಚಿನ ಜಿಐ ಇಂಡೆಕ್ಸ್ ಇರುವ ಆಹಾರ ಪದಾರ್ಥಗಳನ್ನು ನೀವು ಸಾಂದರ್ಭಿಕವಾಗಿ, ಹಿತಮಿತವಾಗಿ ಸ್ವೀಕರಿಸಬೇಕಾಗುತ್ತದೆ. ಉದಾಹರಣೆಗೆ ಐಸ್ ಕ್ರೀಮ್‌ಗಳು, ಚಾಕೊಲೇಟ್‌ಗಳು, ಸಂಸ್ಕರಿಸಿದ ಹಿಟ್ಟು, ಸಿಹಿತಿಂಡಿಗಳು ಇತ್ಯಾದಿ ಸರಳ ಕಾರ್ಬೋಹೈಡ್ರೇಟ್‌ ಪದಾರ್ಥಗಳು. ಈ ಗ್ಲೂಕೋಸ್ ಹೊಂದಿರುವ ಖಾದ್ಯಗಳು ನಿಮ್ಮ ಸಕ್ಕರೆ ಅಂಶದ ಸಮತೋಲನವನ್ನು ಕೆಡಿಸಲು ಸಶಕ್ತವಾಗಿವೆ.

ಈ ಕುರಿತು ಅಬಾಟ್‌ ನ ನ್ಯೂಟ್ರಿಷನ್ ಬಿಸಿನೆಸ್ ನ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಇರ್ಫಾನ್ ಶೇಖ್ ಅವರು, “ಮಧುಮೇಹವನ್ನು ನಿರ್ವಹಿಸುವುದು ಎಂದರೆ ಖಾದ್ಯಗಳನ್ನು ತಿನ್ನುವುದರಿಂದ ಹಿಂದೆ ಸರಿಯುವುದು ಮಾತ್ರವೇ ಅಲ್ಲ, ಆಹಾರದಲ್ಲಿ ಸೂಕ್ತವಾದ ಆಯ್ಕೆಯನ್ನು ಮಾಡುವುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿರ್ವಹಿಸುವುದು ಹೇಗೆ ಎಂದರೆ ನಿಮ್ಮ ಊಟದ ಜಿಐ ಅನ್ನು ಕಡಿಮೆ ಮಾಡುವ ಸೂಕ್ತವಾದ ಸಾಮಾಗ್ರಿಗಳನ್ನು ಕಂಡುಹಿಡಿಯುವುದು. ಸರಿಯಾದ ಪ್ರಮಾಣದಲ್ಲಿ ಸೂಕ್ತವಾದ ಸಾಮಾಗ್ರಿಗಳನ್ನು ಬಳಸುವ ಮೂಲಕ ನಿಮ್ಮ ಊಟದ ಜಿಐ ಅನ್ನು ನೀವು ನಿಯಂತ್ರಣ ಮಾಡಬಹುದು. ಅದರಿಂದ ನಿಮ್ಮ ಗ್ಲೂಕೋಸ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು” ಎನ್ನುತ್ತಾರೆ.
ಆಹಾರದಲ್ಲಿ ಹೆಚ್ಚು ಫೈಬರ್ (ಸಜ್ಜೆ, ಜೋಳ ಮತ್ತು ರಾಗಿ), ಗೋಧಿ ಹಿಟ್ಟಿನ ಬ್ರೆಡ್, ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು (ಬೇಳೆಗಳನ್ನು) ಬಳಸಬೇಕು. ಅವುಗಳು ನಿಮ್ಮ ಸರಳ ಕಾರ್ಬೋಹೈಡ್ರೇಟ್ ಸೇವನೆಯನ್ನು ಸಮತೋಲನಗೊಳಿಸುವುದರಿಂದ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಾಪಾಡುವುದರಿಂದ ಮಧುಮೇಹಿಗಳು ಆಹಾರದಲ್ಲಿ ಬಳಸಿಕೊಳ್ಳಲೇಬೇಕು.

ನಿಮ್ಮ ಇಷ್ಟದ ಆಹಾರಗಳನ್ನು ಸೇವಿಸುತ್ತಲೇ ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಯಂತ್ರಿಸುವ ಮತ್ತೊಂದು ಉತ್ತಮ ಮಾರ್ಗವೆಂದರೆ ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್‌ಎನ್). ಡಿಎಸ್‌ಎನ್ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಸಮತೋಲಿತ ಆಹಾರ ಸೇವನೆ ಸಾಧ್ಯವಾಗಿಸುತ್ತದೆ ಮತ್ತು ಊಟದ ನಂತರದ ರಕ್ತದ ಸಕ್ಕರೆ ಅಂಶದ ಹೆಚ್ಚಳವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೊತೆಗೆ ನೀವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.

ಈ ಕುರಿತು ಬೆಂಗಳೂರಿನ ಲೈಫ್‌ಕೇರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ನ ಸೀನಿಯರ್ ಕನ್ಸಲ್ಟೆಂಟ್ ಫಿಸಿಶಿಯನ್ ಮತ್ತು ಮಧುಮೇಹ ತಜ್ಞ ಪ್ರೊ (ಡಾ) ಎಲ್. ಶ್ರೀನಿವಾಸಮೂರ್ತಿ ಅವರು, “ಮಧುಮೇಹವನ್ನು ನಿರ್ವಹಿಸಲು ಉತ್ತಮ ಆಹಾರ ಸೇವನೆ ಬಹಳ ಮುಖ್ಯ. ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್ಎನ್) ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೈನಂದಿನ ಊಟದಲ್ಲಿ ಅವಶ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಶೇಷ ಪೌಷ್ಟಿಕಾಂಶ ಪಾನೀಯಗಳನ್ನು ಸೇವಿಸುವುದರಿಂದ ಪೋಷಕಾಂಶ ಕೊರತೆಯನ್ನು ಸರಿತೂಗಿಸಬಹುದು. ಜೊತೆಗೆ ಉಲ್ಲಾಸದಿಂದ ಇರುವಂತೆ ಮತ್ತು ಊಟದ ನಂತರ ಗ್ಲೂಕೋಸ್ ನಿಯಂತ್ರಣ ಮಾಡುವಂತೆ ನೋಡಿಕೊಳ್ಳಬಹುದು. ವಿಶೇಷವಾಗಿ ರಕ್ತದ ಸಕ್ಕರೆ ಅಂಶಗಳ ಹೆಚ್ಚಳದ ಕುರಿತು ಚಿಂತಿಸದೆ ಹಬ್ಬಗಳನ್ನು ಸಂಭ್ರಮಿಸಲು ನಿಮಗೆ ಅನುವು ಮಾಡಿಕೊಡುತ್ತದೆ” ಎಂದು ಹೇಳುತ್ತಾರೆ.

ಡಿಎಸ್ಎನ್ ಮಧುಮೇಹಿಗಳಿಗೆ ಹೇಗೆ ಸಹಾಯ ಮಾಡುತ್ತದೆ?
ಡಯಾಬಿಟೀಸ್ ಸ್ಪೆಸಿಫಿಕ್ ನ್ಯೂಟ್ರಿಷನ್ ಮಧುಮೇಹಿಗಳು ಯಾವುದೇ ಗಿಲ್ಟ್ ಇಲ್ಲದೆ ಸಿಹಿ ತಿನ್ನಲು ಅವಕಾಶ ಮಾಡಿಕೊಡುತ್ತದೆ. ಡಿಎಸ್ಎನ್ ಉತ್ಪನ್ನಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಅವುಗಳನ್ನು ಹೆಚ್ಚು ಕಾರ್ಬ್, ಹೆಚ್ಚು ಸಕ್ಕರೆ ಇರುವ ಖಾದ್ಯಗಳ ಬದಲಿಗೆ ಬಳಸಬಹುದಾಗಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಡಿಎಸ್ಎನ್ ಬಳಕೆ ಮತ್ತು ಇತರ ಮಧುಮೇಹ ಸ್ನೇಹಿ ಸಾಮಾಗ್ರಿಗಳನ್ನು ಬಳಸುವ ಕುರಿತು ಕೆಲವು ಸಲಹೆಗಳು ಇಲ್ಲಿವೆ:

ಡಿಎಸ್ಎನ್ ಶೇಕ್‌ಗಳು: ಸಕ್ಕರೆ ಹೊಂದಿರುವ ಮಿಲ್ಕ್‌ ಶೇಕ್‌ಗಳು ಅಥವಾ ಸ್ಮೂಥಿಗಳ ಬದಲಿಗೆ ಡಿಎಸ್ಎನ್ ಶೇಕ್ ಮಿಕ್ಸ್ ಅನ್ನು ಬೆರ್ರಿ ಅಥವಾ ಅಂಜೂರದ ಹಣ್ಣುಗಳಂತಹ ಮಧುಮೇಹ-ಸ್ನೇಹಿ ಹಣ್ಣುಗಳ ಜೊತೆ ಸೇರಿಸಿ ಶೇಕ್ ತಯಾರಿಸಿ ಸೇವಿಸಬಹುದು.
ಬದಲಿ ಸಕ್ಕರೆ: ಸಕ್ಕರೆಯ ಬದಲಿಗೆ ಕೃತಕ ಸ್ವೀಟ್ ನರ್ ಗಳನ್ನು ಮಧ್ಯಮ ಪ್ರಮಾಣದಲ್ಲಿ ಬದಲಿ ಸಕ್ಕರೆಯಾಗಿ ಬಳಸಿ.
ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು: ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸುವಾಗ ಹೆಚ್ಚು ಕಾರ್ಬ್ ಇರುವ ಸಾಮಾಗ್ರಿಗಳ ಬದಲಿಗೆ ಡಿಎಸ್ಎನ್ ಪುಡಿ ಅಥವಾ ಬಾದಾಮಿ ಅಥವಾ ಓಟ್ ಹಿಟ್ಟಿನಂತಹ ಕಡಿಮೆ ಜಿಐ ಇರುವ ಹಿಟ್ಟುಗಳನ್ನು ಬಳಸಿ.
ಕಡಿಮೆ ಜಿಐ ಆಹಾರಗಳು: ಬಾಸ್ಮತಿ ಅಕ್ಕಿಯಂತಹ ಹೆಚ್ಚು ಜಿಐ ಹೊಂದಿರುವ ಅಕ್ಕಿಯ ಬದಲಿಗೆ ಬ್ರೌನ್ ರೈಸ್‌ ಬಳಸಿ. ಗೋಧಿ ಚಪಾತಿಯ ಬದಲಿಗೆ ರಾಗಿ, ಸಜ್ಜೆ ಅಥವಾ ಜೋಳದ ರೊಟ್ಟಿಯನ್ನು ಬಳಸಿ ನಿಮ್ಮ ಊಟವನ್ನು ಮಧುಮೇಹ ಸ್ನೇಹಿ ಊಟವಾಗಿಸಿ.

ನಾನು ಬಿಸಿನೆಸ್ ವಿರೋಧಿಯಲ್ಲ; ಏಕಸ್ವಾಮ್ಯದ ವಿರೋಧಿ : ರಾಹುಲ್ ಗಾಂಧಿ ಸ್ಪಷ್ಟನೆ – vishwanews24

ರುಚಿಕರವಾದ ಮಧುಮೇಹ ಸ್ನೇಹಿ ಸಿಹಿ ತಿಂಡಿ ಐಡಿಯಾಗಳು
ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ಮಧುಮೇಹ ಸ್ನೇಹಿಯಾಗಿ ತಯಾರಿಸುವುದು ಅಷ್ಟೇನೂ ಕಷ್ಟವಿಲ್ಲ. ಡಯಾಬಿಟಿಸ್-ಸ್ಪೆಸಿಫಿಕ್ ನ್ಯೂಟ್ರಿಷನ್ (ಡಿಎಸ್ಎನ್) ಉತ್ಪನ್ನಗಳನ್ನು ಬಳಸುವ ಮೂಲಕ ಮಧುಮೇಹವನ್ನು ಸೂಕ್ತವಾಗಿ ನಿರ್ವಹಿಸಬಹುದು ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಸಾಮಾಗ್ರಿಗಳನ್ನು ಬಳಸುವ ಮೂಲಕ ಹಬ್ಬವನ್ನು ಸಂಭ್ರಮಿಸಬಹುದಾಗಿದೆ. ಅಂಥಾ ಕೆಲವು ಮಧುಮೇಹ ಸ್ನೇಹಿ ಖಾದ್ಯಗಳು ಇಲ್ಲಿವೆ:

ಕ್ಯಾರೆಟ್ ಹಲ್ವಾ: ಏಲಕ್ಕಿ ಮತ್ತು ಹುರಿದ ಬಾದಾಮಿಗಳನ್ನು ಹಾಲಿನಲ್ಲಿ ಬೆರೆಸಿದ ಕ್ಯಾರೆಟ್ ಗೆ ಸೇರಿಸಿ. ಎಣ್ಣೆ ಅಂಶ ಆವಿಯಾಗುವವರೆಗೆ ಬೇಯಿಸಿ. ಕಡೆಗೆ ಹುರಿದ ಬಾದಾಮಿ ತುಂಡುಗಳನ್ನು ಅದರ ಮೇಲೆ ಹರಡಿ ಅಲಂಕರಿಸಿ.
ಹಾಲಿನ ಪಾಯಸ: ಶ್ಯಾವಿಗೆಯನ್ನು ಬಂಗಾರ ಬಣ್ಣ ಆಗುವವರೆಗೆ ತುಪ್ಪದಲ್ಲಿ ಹುರಿಯಿರಿ. ನಂತರ ಅದು ದಪ್ಪವಾಗುವವರೆಗೆ ಹಾಲಿನಲ್ಲಿ ಬೇಯಿಸಿ. ಬಣ್ಣ ಮತ್ತು ಪರಿಮಳಕ್ಕಾಗಿ ಕೇಸರಿ ಸೇರಿಸಿ. ನಂತರ ಅದರ ಮೇಲೆ ಒಣ ಹಣ್ಣಿನ ಬೀಜಗಳನ್ನು ಉದುರಿಸಿ.
ಹೆಸರುಬೇಳೆ ಪಾಯಸ: ಹೆಸರು ಬೇಳೆ ಮತ್ತು ಅಕ್ಕಿಯನ್ನು ನಿಧಾನ ಬೆಂಕಿಯಲ್ಲಿ ಬೇಯಿಸಿ. ಸ್ವಲ್ಪ ತುಪ್ಪವನ್ನು ಸೇರಿಸಿ ಮತ್ತು ಹುರಿದ ಬೀಜಗಳು ಹಾಗೂ ಬೆಚ್ಚಗಿನ ಹಾಲನ್ನು ಮಿಶ್ರ ಮಾಡಿ. ಈ ಕುರಿತು ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಶ್ರೀಖಂಡ: ಏಲಕ್ಕಿ ಮತ್ತು ಬಾದಾಮಿ ಮತ್ತು ಪಿಸ್ತಾಗಳನ್ನು ದಪ್ಪನಾದ ಮೊಸರಿನ ಜೊತೆ ಸೇರಿಸಿ ತಂಪಾದ ಖಾದ್ಯವಾಗಿ ಪರಿವರ್ತಿಸಿ.

ಹಿಂದಿ ಕಿರುತೆರೆ ನಟ ನಿತಿನ್ ಚೌಹಾಣ್ ಆತ್ಮಹತ್ಯೆ – vishwanews24

ಹಬ್ಬದ ಸಂದರ್ಭದಲ್ಲಿ ಸಂಭ್ರಮಿಸುವುದರಿಂದ ನಿಮ್ಮ ಆರೋಗ್ಯ ಕೆಡಿಸುವ ಅಗತ್ಯವೇನೂ ಇಲ್ಲ. ಆದರೆ ಕಾರ್ಬೋಹೈಡ್ರೇಟ್ ಸೇವನೆಯ ಮೇಲೆ ಗಮನ ಇರಬೇಕು, ನಿಯಂತ್ರಣ ಇರಬಕು. ಡಿಎಸ್ಎನ್ ಉತ್ಪನ್ನಗಳನ್ನು ಸೇರಿಸಿದ ಖಾದ್ಯಗಳನ್ನು ಸೇವಿಸುವ ಮೂಲಕ ಹಬ್ಬವನ್ನು ಆನಂದಿಸಬಹುದು.

ಸೂಕ್ತವಾದ ಆಹಾರ ಆಯ್ಕೆಯನ್ನು ಮಾಡುವ ಮೂಲಕ, ಕೊಂಚ ಹೊಂದಾಣಿಕೆ ಮಾಡುವ ಮೂಲಕ ಆರೋಗ್ಯದ ಕುರಿತು ಆತಂಕ ಪಡದೆ ಹಬ್ಬವನ್ನು ಸಂಭ್ರಮಿಸಬಹುದು. ಆದರೆ ನಿಮ್ಮ ಸಕ್ಕರೆ ಅಂಶಗಳ ಮೇಲೆ ನಿಗಾ ವಹಿಸುವುದನ್ನು ಮಾತ್ರ ಮರೆಯಬೇಡಿ. ಹಬ್ಬದ ಸಂದರ್ಭದಲ್ಲೂ ಮಧುಮೇಹ ನಿರ್ವಹಣೆಯ ಮೇಲೆ ಗಮನ ಇದ್ದೇ ಇರಲಿ

Leave a Reply