ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷ ರೆಡಿಯಾಗಿದೆ :ಕಾಂಗ್ರೆಸ್ ಶಾಸಕರು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸಂಶಯವೇ ಇಲ್ಲ. ಕಾಂಗ್ರೆಸ್ ನವರೇ ನಮ್ಮ ಬಳಿ ಬಂದಿದ್ದರು ಎಂದೆಲ್ಲ ಹೇಳಿರುವುದಕ್ಕೆ ಕಾಂಗ್ರೆಸ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರೇ ಹೇಳಿರುವುದರಿಂದ ಚುನಾವಣೆಗೆ ಹೋಗುವುದೇ ಸೂಕ್ತವೆಂದು ಕಾಂಗ್ರೆಸ್ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರೇ ಬಂದಿದ್ದರು ಎಂದು ಕಾಂಗ್ರೆಸ್ ನವರ ಬಗ್ಗೆ ಹೇಳುವುದು ಸರಿಯಲ್ಲ. ಸರ್ಕಾರ ರಚನೆಯಾದ ಬಳಿಕ ಎಲ್ಲರೂ ಒಂದಾಗಿ ಹೋಗಬೇಕು. ಮಧ್ಯಂತರ ಚುನಾವಣೆ ಮತ್ತು ಕಾಂಗ್ರೆಸ್ ನಾಯಕರು ನಮ್ಮ ಬಳಿ ಬಂದಿದ್ದರು ಎಂದು ಹೇಳುತ್ತಿರುವುದರ ಹಿಂದೆ ಏನಿದೆ ಎಂದು ಕಾಂಗ್ರೆಸ್ ಶಾಸಕರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ. ಯಾವಾಗ ಚುನಾವಣೆ ನಡೆದರೂ ನಾವು ರೆಡಿ ಇದ್ದೇವೆ. 80 ಶಾಸಕರಿರುವ ನಾವು ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ನಿಂದ ಯಾವುದೇ ಧಕ್ಕೆಯಾಗಿಲ್ಲ. ಯಾವಾಗ ಚುನಾವಣೆ ನಡೆದರೂ ನಾವು ರೆಡಿ ಇದ್ದೇವೆ ಎಂದು ಸೋಮಶೇಖರ್ ಮತ್ತು ಮುನಿರತ್ನ ಹೇಳಿದ್ದಾರೆ..