ಬಳ್ಳಾರಿ: ನಟ ದರ್ಶನ್ ನೋಡ್ಬೇಕು, ಮಾತಾಡ್ಬೇಕು ಎಂದು ಬಳ್ಳಾರಿ ಜೈಲಿನ ಬಳಿ ಬೆಂಗಳೂರಿನ ಕೆಂಗೇರಿ ಬಳಿಯ ಅವರ ಅಭಿಮಾನಿ ಮಹಿಳೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ. ದರ್ಶನ್ ನೋಡಲು ಜೈಲೊಳಗೆ ಬಿಡಿ, ಅವರ ಕುಟುಂಬ ಸದಸ್ಯರನ್ನು ಮಾತ್ರ ಬಿಡ್ತೀವಿ ಅಂತ ನೀವು ಹೇಳೊದಾದ್ರೆ ಅವರನ್ನು ಮದುವೆಯಾಗಲೂ ರೆಡಿಯಿದ್ದೇನೆ ಬೇಕಿದ್ರೆ ಎಂದು ಮಹಿಳೆ ಹೇಳಿದಾಗ ಪೊಲೀಸರು ತಬ್ಬಿಬ್ಬಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದಾಗ ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮಿಗೆ ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಇದೀಗ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ, ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ವರಾತ ತೆಗೆದಿದ್ದಾಳೆ.
ಮನೆಯವರಿಗೆ ಮಾತ್ರ ಬಿಡೋದಾದರೆ ನಾನು ದರ್ಶನ್‌ನರನ್ನ ಮದುವೆಯಾಗುತ್ತೇನೆ ಎಂದ ಮಹಿಳೆ. ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಳೆ.
ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು, ತಿಂಡಿ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಕುಳಿತಿದ್ದಾಳೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…