Featured

ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು – vishwanews24

ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು

ಹೊಸದಿಲ್ಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಮಾಜಿ ಮುಖ್ಯಸ್ಥ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ (80) ಅವರು ದಿಲ್ಲಿಯ ಹೌಜ್ ಖಾಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ʼಎಸಿʼ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಅವರ ಪುತ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ವೇಳೆ ಧನೇಂದ್ರ ಕುಮಾರ್ ಮತ್ತು ಅವರ ಕುಟುಂಬಸ್ಥರು ಹಾಗೂ ಮನೆಕೆಲಸಗಾರರು ಸೇರಿದಂತೆ ಒಟ್ಟು ಐವರು ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :

ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಧನೇಂದ್ರ ಕುಮಾರ್ ಮತ್ತು ಅವರ ಪುತ್ರನನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಧನೇಂದ್ರ ಕುಮಾರ್ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಅವರ ಪುತ್ರ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮನೆಯಲ್ಲಿ ಅಳವಡಿಸಿದ್ದ ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕುಮಾರ್ ಅವರ ಮನೆಗೆ ಸಂಫೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :

Vishwa News 24

Recent Posts

ಇಂಧನ ದರ ಏರಿಕೆ : ಏರ್‌ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ – vishwanews24

ಇಂಧನ ದರ ಏರಿಕೆ : ಏರ್‌ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ ನವದೆಹಲಿ :ಭಾರತದ ಪ್ರತಿಷ್ಟಿತ…

8 hours ago

ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ – vishwanews24

ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ ಕಾಸರಗೋಡು : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಿವಾಹಿತೆಯೊಬ್ಬರು ಇಲಿ ಪಾಷಾಣ…

8 hours ago

ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ ದಾಖಲು – vishwanews24

ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ…

11 hours ago

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ – vishwanews24

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ ಉಡುಪಿ: ಮುಂಗಾರು ಸವಾಲಿಗೆ…

11 hours ago

ಜೂ.12ರವರೆಗೆ ಮಂಗಳೂರು ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಮಾತ್ರ ಸಂಚಾರ – vishwanews24

ಜೂ.12ರವರೆಗೆ ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಸಂಚಾರ ಮಂಗಳೂರು: ಮುಂಬೈ ಸಿಎಸ್‌ಎಂಟೆ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣಾ…

11 hours ago

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಕರಾವಳಿಯಲ್ಲಿ ಮತ್ತೆ ಬಿಸಿಲು – vishwanews24

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಕರಾವಳಿಯಲ್ಲಿ ಮತ್ತೆ ಬಿಸಿಲು ಮಂಗಳೂರು : ಕರ್ನಾಟಕಕ್ಕೆ ಮುಂಗಾರು ಮಾರುತಗಳ ಪ್ರವೇಶ ಕೊಂಚ ವಿಳಂಬವಾಗುವ…

12 hours ago