ಮನ್ ಕಿ ಬಾತ್ ನಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಶ್ಲಾಘನೆ ಮಾಡಿರೋದಕ್ಕೆ ದಂಪತಿಗಳಿಗೆ ನಳಿನ್ ಕುಮಾರ್ ಕಟೀಲ್ ಅಭಿನಂಧನೆ- vishwanews24

Featured, ಉಡುಪಿ

ಉಡುಪಿ: ನವದಂಪತಿ ಆ ದಿನ ಮಾಡಿದ ಸಣ್ಣ ಸಾಮಾಜಿಕ‌ ಕಳಕಳಿಗೆ ದೇಶದ ಪ್ರಧಾನಿಯೇ ಮೆಚ್ಚಿ ಶ್ಲಾಘಿಸಿದ್ದಾರೆ. ಮನ್ ಕಿ ಬಾತ್ ನಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಶ್ಲಾಘನೆ ಮಾಡಿರೋ ದಂಪತಿಗಳಿಗೆ ಇಂದು ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಂಪತಿಗಳ ಮನೆಗೆ ತೆರಳಿ‌ ಅಭಿನಂಧನೆ ಸಲ್ಲಿಸಿದರು.

ನವೆಂಬರ್ 18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬೈಂದೂರು ತಾಲೂಕಿನ ಅನುದೀಪ್ ಹಾಗೂ ಮಿನುಷಾ ದಂಪತಿಗಳು ಹನಿಮೂನ್ ಹೋಗೋದಕ್ಕೂ ಮುನ್ನ ವಿಭಿನ್ನ ಕಾರ್ಯ ಮಾಡಬೇಕು ಅಂತ ನಿರ್ಧರಿಸಿ ಅನುದೀಪ್ ಹಾಗೂ ಮಿನುಷಾ ಬೈಂದೂರಿನ ಸೋಮೇಶ್ವರ ಬೀಚ್ ನಲ್ಲಿ ಏಳು ದಿನಗಳ ಕಾಲ 700ಮೀಟರ್ ಉದ್ದಕ್ಕೂ500ಕೆಜಿ ಕಸ ಸಂಗ್ರಹ‌ ಮಾಡುವ ಮೂಲಕ ಸ್ವಚ್ಚತೆ ಮಾಡಿದ್ದಾರೆ.‌ ದಂಪತಿಗಳ ಈ ಕಾರ್ಯ ವೈರಲ್ ಕೂಡ ಆಗಿತ್ತು. ಇದನ್ನ ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಮನ್ ಕಿ ಬಾತ್‌ನಲ್ಲಿ ದಂಪತಿಗಳ ಕಾರ್ಯವನ್ನ ಶ್ಲಾಘಿಸಿದ್ದಾರೆ.
ಅಭಿನಂದನ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರ್ ಉದಯಕುಮಾರ್ ಶೆಟ್ಟಿ,ಜಿಲ್ಲಾಧ್ಯಕ್ಷ ಸುರೇಶ್ ನಾಯಕ್,ಯಶ್ಪಾಲ್ ಸುವರ್ಣ,ದಿನಕರ ಬಾಬು,ಶಿಲ್ಪಾ ಜಿ‌ ಸುವರ್ಣ ,ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್